ನೀತಿ ಸಂಹಿತೆ ಎಫೆಕ್ಟ್ – ಎಟಿಎಂ ನಲ್ಲಿ ನೋ ಕ್ಯಾಸ್
ವಿಧಾನಸಭೆ ಚುನಾವಣೆಯು ಸಮೀಪಿಸುತ್ತಿದ್ದಂತೆ ಹಣದ ಹರಿವು ಹೆಚ್ಚಾಗಿರೋದು ಕಂಡು ಬರುತ್ತಿದೆ. ಇದೇ ವೇಳೆ ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ಹಣಕ್ಕಾಗಿ ಜನ ಮತ್ತೆ ಕ್ಯೂ ನಿಲ್ಲುವಂತಾಗಿದೆ.
ಮದುವೆ, ಗೃಹಪ್ರವೇಶ ಮೊದಲಾದ ಕಾರ್ಯಗಳಿಗೆ ದೊಡ್ಡ ಮೊತ್ತದ ಹಣ ಬೇಕಾದಲ್ಲಿ ಬ್ಯಾಂಕ್ ಗೆ ಹೋಗಬೇಕಿದೆ. ಇನ್ನು ಬೇರೆಯವರಿಂದ ಸಾಲ ಪಡೆದರೂ ಸೂಕ್ತವಾದ ದಾಖಲೆ ಹೊಂದಿರಬೇಕು. ನೀತಿ ಸಂಹಿತೆ ಕಾರಣದಿಂದ ದೊಡ್ಡ ಮೊತ್ತದ ಹಣವನ್ನು ಕೂಡ ಸಾಗಿಸುವಂತಿಲ್ಲ. ಕಡಿಮೆ ಮೊತ್ತದ ಹಣವನ್ನು ಪಡೆಯಲು ಎ.ಟಿ.ಎಂ.ಗಳಿಗೆ ಹೋದರೆ, ಬಹುತೇಕ ಎ.ಟಿ.ಎಂ.ಗಳಲ್ಲಿ ನೋ ಕ್ಯಾಶ್ ಬೋರ್ಡ್ ನೇತು ಹಾಕಲಾಗಿದೆ. ಕೆಲವು ಎ.ಟಿ.ಎಂ.ಗಳಲ್ಲಿ ಹಣ ಇದ್ದರೂ, ಸರದಿ ಸಾಲಿನಲ್ಲಿ ನಿಲ್ಲುವಂತ ಪರಿಸ್ಥಿತಿ ಬಂದಿದೆ. ಕ್ಯೂನಲ್ಲಿ ನಿಂತರೂ ಹಣ ಸಿಗುವ ಖಾತ್ರಿಯೆ ಇಲ್ಲವಾಗಿದೆ. ಎಲ್ಲಾ ಎಟಿಎಂ ಗಳಲ್ಲಿ ನೋ ಕ್ಯಾಸ್ ಬೋರ್ಡ್ ಕಾಣಸಿಗುತ್ತದೆ.
Comments