ನೀವು ನೈಟ್ ಶಿಫ್ಟ್ ಮಾಡುತ್ತಿದ್ದೀರಾ? ಹಾಗಾದ್ರೆ ಆಹಾರದ ಮೇಲೆ ಗಮನವಿರಲಿ

ಇತ್ತಿಚಿಗೆ ಎಲ್ಲಿ ಕೆಲಸಕ್ಕೆ ಹೋದರೂ ಕೂಡ ನೈಟ್ ಶಿಫ್ಟ್ ಇದ್ದೆ ಇರುತ್ತದೆ.ಉದ್ಯೋಗದ ಆಸೆಯಿಂದ ಕಂಪನಿಗಳು ಹೇಳಿದಂತೆ ಕೇಳುತ್ತವೆ. ಕೆಲವೊಮ್ಮೆ ಅದೇ ಕಾರಣಕ್ಕೆ ನೈಟ್ ಶಿಫ್ಟ್ ಅನ್ನು ಮಾಡಬೇಕಾಗುತ್ತದೆ.
ಕೆಲವೊಂದು ಬಾರಿ ರಾತ್ರಿ ಪಾಳಿಯನ್ನು ಮಾಡುವಾಗ ನಮ್ಮ ಅರೋಗ್ಯ ಕೈ ಕೊಡುತ್ತದೆ. ಏಕೆಂದರೆ ನಮ್ಮ ದೇಹ ರಾತ್ರಿಯ ವೇಳೆಯ ನಿದ್ದೆಗೆ ಹೊಂದಿಕೊಂಡಿರುತ್ತದೆ. ನೈಟ್ ಶಿಫ್ಟ್ ಮಾಡುವವರಿಗೆ ತುಂಬಾ ವ್ಯವಧಾನ ಇರಬೇಕು.. ಈ ಸಮಯದಲ್ಲಿ ಯಾವ ಆಹಾರ ಸೂಕ್ತ ಯಾವ ಆಹಾರ ಸೂಕ್ತವಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಸರಿಯಾದ ಸಮಯಕ್ಕೆ ಊಟ ಮಾಡಬೇಕು. ರಾತ್ರಿಯ ವೇಳೆ ಊಟ ಬಿಟ್ಟರೆ ಕಾಯಿಲೆಗಳು ನಮ್ಮ ದೇಹವನ್ನು ಸೇರಿಕೊಳ್ಳುತ್ತವೆ. ಹಾಗಾಂತ ರಾತ್ರಿಯ ವೇಳೆ ಹೆಚ್ಚಾಗಿಯೂ ಕೂಡ ತಿನ್ನಬಾರದು. ಆರೋಗ್ಯಕರ ತಿಂಡಿಗಳನ್ನು ಸ್ವಲ್ಪ ಪ್ರಮಾಣದಲ್ಲಿ ತಿನ್ನಬೇಕು.ಹೆಚ್ಚಾಗಿ ತಿಂದರೆ ನಿಮಗೆ ನಿದ್ದೆ ಬರುವ ಸಾಧ್ಯತೆ ಇರುತ್ತದೆ. ರಾತ್ರಿಯ ವೇಳೆ ನಿದ್ದೆ ಬರದಂತೆ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು.ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯಬೇಕು. ರಾತ್ರಿಯ ವೇಳೆ ನೀವು ಹೆಚ್ಚು ನೀರು ಕುಡಿಯುವುದು ಅತೀ ಅಗತ್ಯವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡುವುದರಿಂದ ನಿಮ್ಮ ದೇಹವು ನಿರ್ಜಲೀಕರಣದಿಂದ ತಪ್ಪುವುದು. ಇದರಿಂದ ನೀವು ಚುರುಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಟೇಬಲ್ ಮೇಲೆ ಒಂದು ಬಾಟಲಿ ನೀರು ಇಟ್ಟುಕೊಳ್ಳಿ ಮತ್ತು ಬಾಯಾರಿಕೆ ಆಗುವ ಮೊದಲೇ ನೀರು ಸೇವನೆ ಮಾಡಿ. ನೀರು ಮಾತ್ರವಲ್ಲದೆ ಸಿಹಿ ಇಲ್ಲದೆ ಇರುವಂತಹ ಗಿಡಮೂಲಿಕೆ ಚಹಾ, ಸೋಡಿಯಂ ಕಡಿಮೆ ಇರುವಂತಹ ತರಕಾರಿ ಜ್ಯೂಸ್ ಗಳು ಮತ್ತು ಇತರ ಪೋಷಕಾಂಶಗಳು ಇರುವ ಪಾನೀಯಗಳನ್ನು ಕುಡಿಯಿರಿ.
Comments