ಖಾಲಿಹೊಟ್ಟೆಗೆ ಬಾಳೆಹಣ್ಣು ಸೇವನೆ ಸೂಕ್ತನಾ..?
ಬೆಳಿಗ್ಗೆ ಎದ್ದ ತಕ್ಷಣ ನಿತ್ಯ ಕರ್ಮಗಳನ್ನು ಮುಗಿಸಿ ಕೆಲಸಕ್ಕೆ ಹೋಗುವ ಭರಾಟೆಯಲ್ಲಿ ನಮ್ಮ ಜೀವನ ಶೈಲಿಯನ್ನೆ ಮರೆತುಬಿಡ್ತೇವೆ. ಸರಿಯಾದ ಸಮಯಕ್ಕೆ ತಿಂಡಿ ತಿನ್ನಲ್ಲ. ಊಟ ಮಾಡಲ್ಲ, ನಿದ್ದೆ ಮಾಡಲ್ಲ. ಈ ರೀತಿಯಿಂದ ನಮ್ಮ ಆರೋಗ್ಯ ಹಾಳಾಗುತ್ತದೆ.
ಮುಂಜಾನೆಯ ವೇಳೆಯಲ್ಲಿ ತಿಂಡಿ ನಮ್ಮ ಆರೋಗ್ಯಕ್ಕೆ ತುಂಬ ಮುಖ್ಯ. ಬೆಳಗಿನ ತಿಂಡಿಯನ್ನು ಯಾವುದೇ ಕಾರಣಕ್ಕೂ ಕೂಡ ಬಿಡಬಾರದು. ಒಂದು ವೇಳೆ ಬಿಟ್ಟರೆ ಆರೋಗ್ಯ ಹಾಳಾಗೋದರಲ್ಲಿ ನೋ ಡೌಟ್. ಲೇಟಾಗುತ್ತೆ ಅನ್ನೋ ಕಾರಣಕ್ಕೆ ಬಾಳೆಹಣ್ಣನ್ನು ತಿಂದು ಆಗೆ ಹೋಗಿಬಿಡುತ್ತಾರೆ. ಆದರೆ ಖಾಲಿಹೊಟ್ಟೆಗೆ ಬಾಳೆಹಣ್ಣು ಅಷ್ಟು ಸೂಕ್ತವಲ್ಲ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಪ್ರಮಾಣ ಹೆಚ್ಚಾಗಿರುವುದರಿಂದ ನಮ್ಮ ದೇಹದಲ್ಲಿನ ಖನಿಜಗಳ ಸಮತೋಲನವು ಏರುಪೇರಾಗುತ್ತದೆ. ಬೇರೆ ಸಮಯದಲ್ಲಿ ತಿಂದರೆ ಆರೋಗ್ಯಕ್ಕೆ ಬಾಳೆಹಣ್ಣು ತುಂಬಾ ಒಳ್ಳೆಯದು. ಆದಷ್ಟು ಖಾಲಿ ಹೊಟ್ಟೆಗೆ ಬಾಳೆಹಣ್ಣು ಸೇವನೆಯನ್ನು ನಿಲ್ಲಿಸಬೇಕು. ಬೇರೆ ಸಮಯದಲ್ಲಿ ತಿಂದರೆ ಆರೋಗ್ಯವು ವೃದ್ದಿಸುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮಲಬದ್ದತೆ, ಸುಸ್ತು, ಈ ರೀತಿಯ ಕಾಯಿಲೆಗಳನ್ನು ಕೂಡ ನಿವಾರಿಸುತ್ತದೆ. ಬಾಳೆಹಣ್ಣನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡುವುದಕ್ಕಿಂತ ಬೇರೆ ಸಮಯದಲ್ಲಿ ಸೇವನೆ ಮಾಡಿದರೆ ಹೆಚ್ಚು ಲಾಭ.
Comments