ಈ ಬಾರಿ ಅಕ್ಷಯ ತೃತೀಯ ತುಂಬಾ ಕಾಸ್ಲಿ

16 Apr 2018 2:21 PM | General
608 Report

ಇನ್ನೆನು ಅಕ್ಷಯ ತೃತಿಯ ಬಂದೆ ಬಿಡ್ತು. ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡಲು ಹೋದರೆ ಕಳೆದ ವರ್ಷಕ್ಕಿಂತಲೂ ಹೆಚ್ಚು ಹಣವನ್ನು ಈ ಬಾರಿ ಖರ್ಚು ಮಾಡಬೇಕಾದಿತು.

ಚಿನ್ನದ ದರ 32 ಸಾವಿರ ರೂ. ತಲುಪಿದ್ದು, ಏ.18ರ ಅಕ್ಷಯ ತೃತೀಯ ಹೊತ್ತಿಗೆ ಅಲ್ಪ ಪ್ರಮಾಣದಲ್ಲಿ ಇನ್ನೂ ಏರಿಕೆಯಾಗಬಹುದು. ಆಭರಣ ಮಾರಾಟ ಈ ಸಲ ಶೇ.15-20ರಷ್ಟು ವೃದ್ಧಿಯಾಗಬಹುದು ಎಂದು ಅಂದಾಜನ್ನು ಕೂಡ ಮಾಡಲಾಗಿದೆ. ಭಾನುವಾರ 10 ಗ್ರಾಂ ಚಿನ್ನದ ಬೆಲೆ 32 ಸಾವಿರ ರೂ. ಆಗಿತ್ತು. ಮುಂದಿನ 3-4 ದಿನಗಳಲ್ಲಿ ಚಿನ್ನದ ಬೆಲೆ ಇದೇ ರೀತಿ ಏರಿದರೆ ಈ ಸಲದ ಅಕ್ಷಯ ತೃತೀಯ ಸಾಕಷ್ಟು ದುಬಾರಿ ಆಗಬಹುದು.  ಅಮೆರಿಕ ಮತ್ತು ಸಿರಿಯಾ ನಡುವಿನ ಕದನದ ಹಿನ್ನೆಲೆಯಲ್ಲಿ ಈ ವರ್ಷದ ಕೊನೆಯ ವೇಳೆಗೆ ಚಿನ್ನದ ಬೆಲೆಗಳು ತೀವ್ರ ಏರಿಕೆಯಾಗುವ ಸಾಧ್ಯತೆ ಇದೆ. ಈವರೆಗೆ ಚಿನ್ನದ ದರದಲ್ಲಿ ಅಲ್ಪ ಏರಿಳಿಕೆ ಯಿದ್ದರೂ ದರ ಸ್ಥಿರವಾಗಿದೆ ಎನ್ನಬಹುದು.

Edited By

Manjula M

Reported By

Manjula M

Comments