ಏನ್ ಕಾಲ ಬಂತಪ್ಪ..!ಇದಕ್ಕೆ ಅನ್ಸುತ್ತೆ ಚಿನ್ನದ ಬೆಲೆ ಹೆಚ್ಚಾಗಿರೋದು?
ಚಿನ್ನ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ.. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಬಿಡಿ ಬಾಯ್ ಬಾಯ್ ಬಿಡ್ತಾರೆ..ಅದಕ್ಕೆ ಅನ್ನಿಸುತ್ತೆ ಚಿನ್ನದ ಬೆಲೆ ಗಗನಕ್ಕೆ ಏರುತ್ತಿರುವುದು.
ಜನರಿಗೆ ನಾನಾ ರೀತಿಯಲ್ಲಿ ಚಿನ್ನದ ಅಭ್ಯಾಸಗಳು ಇರುತ್ತದೆ. ಇದಕ್ಕೆಅತ್ತುತ್ತಮ ಹೊಸ ರೀತಿಯ ಉದಾಹರಣೆ ಎಂದರೆ ಪಾಕಿಸ್ತಾನದ ವ್ಯಕ್ತಿ. ಈತ ತನ್ನ ಮದುವೆದ ದಿನದಂದು ಚಿನ್ನದಲ್ಲಿ ತಯಾರಿಸಿದ ಶೂ ಮತ್ತು ಟೈ ಧರಿಸಿ ಸುದ್ದಿಯಾಗಿದ್ದಾನೆ. ಮಧುಮಗ ಧರಿಸಿದ್ದ ಶೂ 320 ಗ್ರಾಂ ಚಿನ್ನವನ್ನು ಹೊಂದಿದ್ದರೆ, ವರ ಧರಿಸಿದ್ದ ಒಟ್ಟಾರೆ ಚಿನ್ನ 25 ಲಕ್ಷ ಬೆಲೆಬಾಳುತ್ತದೆ. ಚಿನ್ನದ ಶೂ ಧರಿಸಲು ಕಾರಣ ಕೇಳಿದ್ರೆ,'ಜನ ಕೊರಳಿನಲ್ಲಿ ಚಿನ್ನ ಇರಬೇಕೆಂದು ಬಯಸುತ್ತಾರೆ. ಆದರೆ ಶ್ರೀಮಂತಿಕೆ ಎನ್ನುವುದು ಕೊಳಕಿದ್ದಂತೆ. ಅದಕ್ಕೆ ನಾನು ಅದನ್ನು ಕಾಲ ಕೆಳಗಿಡಲು ಬಯಸುತ್ತೇನೆ' ಎನ್ನುತ್ತಾರೆ ವರ ಸಲ್ಮಾನ್. ಅದೇನೆ ಆಗಲಿ ಮದುವೆಗೆ ಹೆಣ್ಣು ಮಕ್ಕಳು ಸಿಂಗರಮಾಡಿಕೊಂಡು ಬಂಗಾರ ತೊಟ್ಟುಕೊಂಡು ನಮ್ಮನ್ನೆ ಎಲ್ಲರೂ ನೋಡಲಿ ಅನ್ನುತ್ತಿದ್ದವರಿಗೆ ನಿರಾಸೆ ಆಗಿದ್ದಂತೂ ಸುಳ್ಳಲ್ಲ.
Comments