ಸ್ವಚ್ಚಕ್ಕೆ ಸಿದ್ದವಾಗಿವೆ ಕರ್ನಾಟಕದ 30 ಪರಂಪರೆಯ ತಾಣಗಳು

16 Apr 2018 10:21 AM | General
502 Report

ಏಪ್ರಿಲ್ 18 ರಂದು ಇರುವ ಅಂತರಾಷ್ಟ್ರೀಯ ವಿಶ್ವ ಪರಂಪರೆ ದಿನಾಚರಣೆಯ ಹಿನ್ನಲೆಯಲ್ಲಿ ಪುರಾತತ್ವಶಾಸ್ತ್ರ ಇಲಾಖೆ 15 ದಿನಗಳ ವೈಜ್ಞಾನಿಕ ಸ್ವಚ್ಛತಾ ಕಾರ್ಯಕ್ರಮವನ್ನು ಹಂಪಿಯಲ್ಲಿ ಮತ್ತು ಬೆಂಗಳೂರಿನಲ್ಲಿ ಇಂದಿನಿಂದ ಹಮ್ಮಿಕೊಂಡಿದೆ.

ರಾಜ್ಯದಲ್ಲಿರುವ 30 ಸ್ಮಾರಕಗಳನ್ನು ಈಗಾಗಲೇ ಗುರುತಿಸಿದ್ದಾರೆ. ಸುಮಾರು ವರ್ಷಗಳಿಂದಲೂ ಕೂಡ ಪರಂಪರೆ ಎಂಬ ಘೋಷವಾಕ್ಯದಡಿ ಈ ದಿನಾಚರಣೆಯನ್ನು ಆಚರಿಸುತ್ತಿದ್ದು ಪಾರಂಪರಿಕ ತಾಣಗಳ ಬಗ್ಗೆ ಜಾಗರೂಕತೆಯಿಂದ ಇಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ ಎಂದು ಪುರಾತತ್ವ ಸಮೀಕ್ಷೆ ಇಲಾಖೆಯ ಸೂಪರಿಂಟೆಂಡೆಂಟ್ ಕೆ. ಮೂರ್ತೀಸ್ವರಿ ತಿಳಿಸಿದ್ದಾರೆ. ಕೋಲಾರದ ಕೋಲಾರಮ್ಮ ದೇವಸ್ಥಾನ ಮತ್ತು ಸೋಮೇಶ್ವರ ದೇವಾಲಯ, ಬಾರ್ಕೂರಿನ ಕಟ್ಟಲೆ ಬಸದಿ ಶ್ರೀರಂಗಪಟ್ಟಣದ ದರಿಯಾ ದೌಲತ್, ಕೇಶವ ದೇವಸ್ಥಾನ, ಬೇಲೂರು, ಹಳೆಬೀಡು, ಚಂದ್ರಗುಟ್ಟಿ ಕೋಟೆ ಮತ್ತು ಶಿವಮೊಗ್ಗದ ರೇಣುಕಾ ದೇವಸ್ಥಾನ ಶ್ರವಣಬೆಳಗೊಳ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಮನಗೊಂಡನಹಳ್ಳಿ ,ದಾವಣಗೆರೆ ಹರಿಹರದ ಹರಿಹರೇಶ್ವರ ದೇವಸ್ಥಾನ, ಸೋಮನಾಥಪುರದ ಕೇಶವ ದೇವಸ್ಥಾನ, ಚಿತ್ರದುರ್ಗದ ಕೋಟೆ, ಬಾಗ್ಲಿಯ ಕಲ್ಲೇಶ್ವರ ದೇವಸ್ಥಾನ, ಅವನಿಯ ರಾಮಲಿಂಗೇಶ್ವರ ದೇವಸ್ಥಾನ, ,ಮತ್ತು ಬೆಂಗಳೂರಿನ ಟಿಪ್ಪು ಬೇಸಿಗೆ ಅರಮನೆಗಳನ್ನು ಸ್ವಚ್ಛತಾ ಕಾರ್ಯಕ್ರಮಕ್ಕೆ ಆರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

 

Edited By

Manjula M

Reported By

Manjula M

Comments