ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇಂದು ಕೊನೆಯ ದಿನ

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ಮತದಾರರೆಲ್ಲಾ ಮತ ಚಲಾಯಿಸಲು ಮುಂದಾಗುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಈಗಾಗಲೇ ಸಾಕಷ್ಟು ಸಮಯವನ್ನು ನೀಡಿದ್ದರೂ ಕೂಡ ಯಾರು ಇದರ ಬಗ್ಗೆ ಸರಿಯಾದ ಗಮನವನ್ನು ನೀಡಿಲ್ಲ.
ಆದರೆ ಇನ್ನೂ ಹೆಸರು ಸೇರಿಸಿಲ್ಲದವರು ಹೆಸರನ್ನು ಸೇರಿಸಲು ಇಂದು ಅಂತಿಮ ದಿನವಾಗಿದೆ. ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ಮತ್ತೊಮ್ಮೆ ಸಮಯವನ್ನು ನೀಡುವುದಿಲ್ಲ. ಮತದಾರರು ಇದನ್ನು ಅರ್ಥ ಮಾಡಿಕೊಂಡು ಬಿಟ್ಟು ಹೋಗಿರುವ ಹೆಸರನ್ನು ಸೇರಿಸಬೇಕು ಎಂದು ಬಿಬಿಎಂಪಿಯು ಈ ಮೂಲಕ ತಿಳಿಸಿದೆ. ಇದೇ ಸಂದರ್ಭದಲ್ಲಿ ಹೆಸರು, ವಿಳಾಸ ತಿದ್ದುಪಡಿ, ವರ್ಗಾವಣೆ ಸೇರಿ ಇನ್ನಿತರ ಕಾರ್ಯಕ್ಕೂ ಅರ್ಜಿ ಸಲ್ಲಿಸಬಹುದಾಗಿ ಎಂದು ಜಿಲ್ಲಾ ಚುನಾವಣಾಧಿಕಾರಿಗಲು ತಿಳಿಸಿದ್ದಾರೆ. ಇನ್ನು ಏ.14 ಕ್ಕೆ ಮತದಾರರ ಪಟ್ಟಿ ಸೇರ್ಪಡೆಗೆ ಅಂತಿಮ ಗಡುವು ನೀಡಲಾಗಿದ್ದು, ಬಳಿಕ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
Comments