ರಾಕಿಂಗ್ ಸ್ಟಾರ್ ಮತದಾರರಿಗೆ ಏನ್ ಹೇಳಿದ್ರು ಗೊತ್ತಾ?
ಸ್ಯಾಂಡಲ್ವುಡ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಯಶ್ ಅವರು ಈಗ ಕೆಲವರಿಗೆ ಸಲಹೆಯನ್ನು ನೀಡಿದ್ದಾರೆ. ಆದರೆ ಅವರು ಸಲಹೆ ನೀಡಿರುವುದು ಸಿನಿಮಾ ಅಭಿಮಾನಿಗಳಿಗಲ್ಲ ಬದಲಿಗೆ ಅವರು ಸಲಹೆ ನೀಡಿರುವು ಮತದಾರರಿಗೆ.
ಅವರು ಮತದಾನ ಎನ್ನುವ ಪವರ್ ಫುಲ್ ಕಾರ್ಯವನ್ನು ಜನಸಾಮಾನ್ಯರು ಒಳ್ಳೆಯ ವ್ಯಕ್ತಿಗೆ ಸಲ್ಲಿಸಬೇಕು. ಆಗಲೇ ಉತ್ತಮ ದೇಶ ಕಟ್ಟಲು ಸಾಧ್ಯವೆಂದು ಮತದಾರರಿಗೆ ಸಲಹೆ ಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಯಶ್, ರಾಜಕಾರಣಿಗಳು ಚುನಾವಣಾ ಪ್ರಚಾರ ಅಂದ್ರೆ ಬರೀ ಕೋಟಿ ಕೋಟಿ ಹಣ ಖರ್ಚು ಮಾಡಿ ದೊಡ್ಡ ಸಮಾವೇಶ ಮಾಡುವುದು ಅಷ್ಟೇ ಎಂದುಕೊಂಡಿದ್ದಾರೆ. ಒಬ್ಬ ಅಭ್ಯರ್ಥಿಗೆ ತಾನು ಸ್ಪರ್ಧಿಸುವ ಕ್ಷೇತ್ರಕ್ಕೆ ಏನು ಬೇಕು. ತಾನೂ ಏನು ಕೆಲಸ ಮಾಡಬೇಕು ಎನ್ನುವುದು ಗೊತ್ತಿರುವುದಿಲ್ಲ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನೋಡೋದಾದ್ರೆ ಎಲ್ಲರೂ ಕೂಡ ಯೋಚನೆ ಮಾಡಿ ಒಬ್ಬ ಒಳ್ಳೆಯ ನಾಯಕನಾಗಿ ಆರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
Comments