ಮೆದುಳನ್ನು ಯಾವಾಗಲೂ ಚುರುಕಾಗಿಸಿರುವುದು ಹೇಗೆ?
ನಮ್ಮ ದೇಹದಲ್ಲಿ ಮೆದುಳು ತುಂಬಾ ಮುಖ್ಯವಾದ ಅಂಗಗಳಲ್ಲಿ ಒಂದಾಗಿದೆ. ಮೆದುಳನ್ನು ಆರೋಗ್ಯಕರ ಸ್ಥಿತಿಯಲ್ಲಿ ಇಡದಿದ್ದರೆ ಎಷ್ಟೇ ಆರೋಗ್ಯವಂತ ವ್ಯಕ್ತಿಗಳೂ ಅನೇಕ ಕಾಯಿಲೆಗಳಿಗೆ ತುತ್ತಾಗುವುದು ಸರ್ವೆ ಸಾಮಾನ್ಯ. ದೇಹದ ಕಾರ್ಯ ನಿರ್ವಹಣೆಗಳಿಗೆ ಮೆದುಳು ಯಂತ್ರದಂತೆ ಕೆಲಸ ಮಾಡುತ್ತದೆ. ಆದ್ದರಿಂದ ಮೆದುಳನ್ನು ಸಮರ್ಪಕವಾಗಿ ಮತ್ತು ಕ್ರಿಯಾಶೀಲವನ್ನಾಗಿ ಇರಿಸುವುದು ಹೆಚ್ಚು ಅತ್ಯಗತ್ಯವಾಗಿದೆ.
ಸ್ಟ್ರಾಬೆರಿ ಮುಂತಾದ ಬೆರ್ರಿ ಜಾತಿಗೆ ಸೇರಿದ ಹಣ್ಣುಗಳಲ್ಲಿ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುಣವಿದೆ ಎಂದು ಹೇಳುತ್ತಾರೆ. ಈ ಹಣ್ಣುಗಳನ್ನು ಸೇವಿಸಿದರೆ ಮರೆವಿನ ಸ್ಥಿತಿಯು ನಿಧಾನವಾಗಿ ಕಡಿಮೆಯಾಗುತ್ತದೆ ಎಂಬುದನ್ನು ಆರೋಗ್ಯ ಸಂಶೋಧಕರು ಈಗಾಗಲೇ ಸಾಬೀತು ಪಡಿಸಿದ್ದಾರೆ. ಈ ಹಣ್ಣುಗಳಲ್ಲಿ ಯಥೇಚ್ಛ ಪ್ರಮಾಣದಲ್ಲಿ ಫ್ಲೆವನಾಯ್ಡ್ ಎಂಬ ನೈಸರ್ಗಿಕ ಆಂಟಿಆಕ್ಸಿಡೆಂಟ್ ಇದೆಯಂತೆ. ಈ ವಸ್ತು ರಾಸಾಯನಿಕಗಳಿಂದ ಆಗುವ ಒತ್ತಡ ಮತ್ತು ವಯಸ್ಸಾದಂತೆ ಕಾಣಿಸಿಕೊಳ್ಳುವ ಒತ್ತಡದಿಂದ ಮೆದುಳಿನ ಜೀವಕೋಶಗಳನ್ನು ರಕ್ಷಿಸುತ್ತದೆ ಎಂಬುದು ಈಗಾಗಲೇ ತಿಳಿದುಬಂದಿದೆ. ಇದರ ಜೊತೆಗೆ. ಹೊಸ ಭಾಷೆಯನ್ನು ಕಲಿಯುವುದರಿಂದ ಈ ಸಾಮರ್ಥ್ಯ ತನ್ನಿಂತಾನೇ ಅಧಿಕಗೊಳ್ಳುತ್ತದೆ. ದೀರ್ಘ ಕಾಲದವರೆಗೆ ಇದು ಡೈಮೆನ್ಷಿಯ ಅಂದರೆ ವಯಸ್ಸಾದ ಸಮಯದಲ್ಲಿ ನಿಮ್ಮನ್ನ ಕಾಡುತ್ತದೆ. ಮುಂತಾದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
Comments