ಸಮ್ಮರ್ ನಲ್ಲಿ ಮಕ್ಕಳನ್ನು ಹೇಗೆ ನಿಭಾಯಿಸೋದು?

ಸಮ್ಮರ್ ಹತ್ತಿರ ಬಂದಂತೆ ಪೋಷಕರಿಗೆ ಫುಲ್ ಟೆನ್ಷನ್ ಆಗುತ್ತದೆ.. ಅಯ್ಯೋ ಎರಡು ತಿಂಗಳ ರಜೆಯಲ್ಲಿ ಮಕ್ಕಳಿಗೆ ಏನು ಮಾಡೋದು? ಟ್ರಾವೆಲ್ ಮಾಡೋದು, ಸಂಬಂಧಿಕರ ಮನೆಗೆ ಹೋಗೋದನ್ನು ಬಿಟ್ಟು ಸಮ್ಮರ್ನಲ್ಲಿ ಮಕ್ಕಳು ಬೇರೆ ಏನೆಲ್ಲಾ ಮಾಡಬಹುದು ಅಂತ ಯೋಚನೆ ಮಾಡಿ...
ಮಕ್ಕಳಿಗೂ ಸಹ ಗಾರ್ಡನಿಂಗ್ ಮಾಡುವುದು ಇಷ್ಟವಾಗಿರುತ್ತದೆ. ಇದು ಸಮ್ಮರ್ ಸೀಸನ್‌ನಲ್ಲಿ ಅವರನ್ನು ಎಂಗೇಜ್ ಆಗಿಡಲು ಬೆಸ್ಟ್ ವಿಧಾನ ಎನ್ನಬಹುದು. ನಿಮ್ಮ ಮನೆಯ ಹಿಂಭಾಗದಲ್ಲಿ ಸಣ್ಣ ಗಾರ್ಡನ್ ಮಾಡಿ ಅಲ್ಲಿ ಮಕ್ಕಳು ಗಿಡಗಳನ್ನು, ಬೀಜಗಳನ್ನು ನೆಡುವಂತೆ ಮಾಡಿ. ಜೊತೆಗೆ ಪ್ರತಿದಿನ ಅದಕ್ಕೆ ನೀರು ಹಾಕುವಂತೆ ತಿಳಿಸಿ ಹೇಳಿ.ಮನೆಯ ಹತ್ತಿರ ಎಲ್ಲೆಲ್ಲಿ ಸಮ್ಮರ್ ಕ್ಯಾಂಪ್ ನಡೆಯುತ್ತದೆ ಎನ್ನುವುದರ ಕಡೆಗೆ ಗಮನ ಹರಿಸಿಹಾಗೂ ಸಮ್ಮರ್ ಕ್ಯಾಂಪ್ ಗಳಿಗೆ ಮಕ್ಕಳನ್ನು ಸೇರಿಸಿ. ಸಮ್ಮರ್‌ನಲ್ಲಿ ಮಕ್ಕಳನ್ನು ಬ್ಯುಸಿಯಾಗಿಡಲು ಇದು ಸೂಕ್ತ ವಿಧಾನ ಇದೆಲ್ಲದರ ಜೊತೆಗೆ ಸಮ್ಮರ್ ವೆಕೇಶನ್‌ನಲ್ಲಿ ಮಕ್ಕಳು ಏನೆಲ್ಲಾ ಮಾಡಿದ್ದಾರೆ ಅವುಗಳ ಫೋಟೊ, ನೆನಪಿನ ವಸ್ತುಗಳನ್ನು ಜೊತೆಯಾಗಿ ಸೇರಿಸಿ ಮೆಮೊರಿ ಬೋರ್ಡ್ ತಯಾರಿಸುವಂತೆ ಮಾಡಿ. ಇದರಿಂದ ಮಕ್ಕಳಿಗೂ ಸಹ ಸಂತೋಷವಾಗುತ್ತದೆ.
Comments