ಶಾಪಿಂಗ್ ಪ್ರಿಯರಿಗೊಂದು ಸಿಹಿ ಸುದ್ದಿ
ಶಾಪಿಂಗ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಆಕರ್ಷಕ ಮಾಲ್ ಗಳು, ಆದರೆ ಇನ್ನು ಮುಂದೆ ಶಾಂಪಿಂಗ್ ಗೆ ಮಾಲ್ ಗಳಿಗೆ ಹೋಗಬೇಕೆಂದೇನಿಲ್ಲ. ಮೆಟ್ರೋ ನಿಲ್ದಾಣಗಳಲ್ಲೇ ಶಾಪಿಂಗ್ ಮಾಡಬಹುದು.
ಮೆಟ್ರೋ ನಿಲ್ದಾಣಗಳೆಂದರೆ ರೈಲು ನಿಲ್ಲುವ ಸ್ಥಳ ಎಂದು ಮಾತ್ರ ಪರಿಗಣಿಸಲಾಗಿದೆ. ಈ ನಿಲ್ದಾಣಗಳನ್ನು ಸುಂದರವಾದ ಶಾಪಿಂಗ್ ಸ್ಥಳವಾಗಿಸಲು ಬಿಎಂಆರ್ ಸಿಎಲ್ ಈಗಾಗಲೇ ನಿರ್ಧರಿಸಿದೆ. ಸಣ್ಣ ಸಣ್ಣ ಮಳಿಗೆಗಳಿಗೆ ಅವಕಾಶ ನೀಡುವ ಮೂಲಕ ಆಲ್ ಮಾದರಿಯನ್ನು ಅನುಸರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಕೆಲವೊಂದು ನಿಲ್ದಾಣಗಳಲ್ಲಿ ಈಗಾಗಲೇ ಪುಸ್ತಕ ಮಳಿಗೆಗಳು, ಹೋಟೆಲ್ ಗಳು, ಹೇರ್ ಸಲೂನ್ ಗಳು ಆರಂಭವಾಗಿದೆ. ನಗರದ ಯಾವುದೇ ಮಾಲ್ ಗೆ ಹೋದರೆ ಪ್ರವೇಶ ದ್ವಾರದಲ್ಲಿ ಪೆಟ್ಟಿ ಅಂಗಡಿಯಂತಿರುವ ಕಿಯೋಸ್ಕ್ ಮಳಿಗೆಗಳು ಕಂಡುಬರುತ್ತವೆ. ಇವುಗಳಲ್ಲಿ ಆಭರಣ, ಕರಕುಶಲ ವಸ್ತುಗಳು, ಮೊಬೈಲ್ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳು, ಉಡುಪು, ಬ್ಯಾಗ್, ಪರ್ಸ್, ಕೈಗಡಿಯಾರ ಮಾರಾಟವಾಗುತ್ತಿರುವುದನ್ನು ಕಾಣಬಹುದಾಗಿದೆ. ಇನ್ನೂ ಮುಂದೆ ನೀವು ಕೂಡ ಶಾಪಿಂಗ್ ಅನ್ನು ಮೆಟ್ರೊ ನಿಲ್ದಾಣದಲ್ಲೆ ಮಾಡಬಹುದು.
Comments