ಮೇ. 2 ರಂದು ಪಿಯು ಉಪನ್ಯಾಸಕರಿಂದ ತರಗತಿಗಳ ಬಹಿಷ್ಕಾರ

ಬೇಸಿಗೆ ರಜೆ ಕಡಿತಗೊಳಿಸಿ ಪಿಯುಸಿ ತರಗತಿಗಳು ಬೇಗನೆ ಆರಂಭ ಮಾಡುತ್ತಿರುವುದಕ್ಕೆ ತೀವ್ರ ವಿರೋಧವನ್ನು ಉಪನ್ಯಾಸಕರು ವ್ಯಕ್ತಪಡಿಸಿದ್ದಾರೆ.
ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕು.ಇಲ್ಲವಾದರೆ ಮೇ. 2 ರಂದು ರಾಜ್ಯವ್ಯಾಪಿ ತರಗತಿಗಳನ್ನು ಬಹಿಷ್ಕರಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ.ಸಂಘದ ಅಧ್ಯಕ್ಷರಾದ ಪುರ್ಲೆ ಅವರು, ಪದವಿ ಪೂರ್ವ ಶಿಕ್ಷಣ ಇಲಾಖೆಯ ರಜೆ ಸೌಲಭ್ಯ ಹೊಂದಿರುವ ಇಲಾಖೆಯಾಗಿರುವುದರಿಂದ ದಸರಾ ಹಾಗೂ ಬೇಸಿಗೆ ಅವಧಿಯ ಮೂರು ತಿಂಗಳ ರಜೆ ಪಡೆಯುವುದು ಉಪನ್ಯಾಸಕರ ಹಕ್ಕಾಗಿದೆ. ಇದನ್ನ ಸರ್ಕಾರ ರಜೆ ರಹಿತ ಇಲಾಖೆಯೆಂದು ಅಧಿಕೃತವಾಗಿ ಆದೇಶ ಹೊರಡಿಸಬೇಕು ಇಲ್ಲವೇ ಸುತ್ತೋಲೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
Comments