ಪೀಣ್ಯಕ್ಕೆ ಮತ್ತೆ ಸ್ಥಳಾಂತರವಾದ ಉತ್ತರ ಕರ್ನಾಟಕ ಬಸ್ ಗಳು

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದತ್ತ ತೆರಳುತ್ತಿದ್ದ ಬಸ್ ಗಳನ್ನು ಕೆಂಪೇಗೌಡ ಬಸ್ ನಿಲ್ದಾಣದಿಂದ ಪೀಣ್ಯ ಬಳಿಯ ಬಸವೇಶ್ವರ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿದೆ.
ಕೆಎಸ್ ಆರ್ ಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಯ 60 ಬಸ್ ಗಳನ್ನು ಕೆಂಪೇಗೌಡ ಬಸ್ ನಿಲ್ದಾಣದಿಂದ ಪೀಣ್ಯಕ್ಕೆ ಸ್ಥಳಾಂತರಿಸಿ, ಅಲ್ಲಿಂದಲೇ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅಯ್ಯಪ್ಪ ದೇವಸ್ಥಾನ, ಜಾಲಹಳ್ಳಿ ಮೆಟ್ರೊ ನಿಲ್ದಾಣದಿಂದ ಬಸವೇಶ್ವರ ನಿಲ್ದಾಣಕ್ಕೆ ಸೇರಿಸಲಾಗಿದೆ.ಇನ್ನು ರಾಜ್ಯ ಮತ್ತು ಹೊರರಾಜ್ಯದ ನಾನಾ ಭಾಗಗಳಿಗೆ ಸಂಚರಿಸುವ ಐಷರಾಮಿ ಬಸ್ ಗಳು, ವೇಗದೂತ ಬಸ್ ಗಳನ್ನು ಹೊರತುಪಡಿಸಿ, ಉಳಿದ 980 ವಾಹನಗಳನ್ನು ಪೀಣ್ಯದ ಬಸವೇಶ್ವರ ನಿಲ್ದಾಣಕ್ಕೆ ಸ್ಥಳಾಂತರಿಸಲು ಈಗಾಗಲೆ ನಿರ್ಧಾರವನ್ನು ಮಾಡಲಾಗಿದೆ.
Comments