ಈ ಅವಳಿ ಮಕ್ಕಳ ಅಂತರ ಎಷ್ಟು ಗೊತ್ತಾ?

12 Apr 2018 5:37 PM | General
551 Report

ಮಕ್ಕಳೆಂದರೆ ಯಾರಿಗ್ ತಾನೆ ಇಷ್ಟ ಇರಲ್ಲ ಹೇಳಿ.. ಅದರಲ್ಲೂ ಅವಳಿ ಜವಳಿ ಮಕ್ಕಳು ಅಂದರೆ ತುಂಬಾನೇ ಇಷ್ಟ... ಅವಳಿ ಮಕ್ಕಳಾದರೆ ಎಷ್ಟು ನಿಮಿಷ ಗ್ಯಾಪ್‍ನಲ್ಲಿ ಹುಟ್ಟಬಹುದು ಹೇಳಿ.. 1 ನಿಮಿಷ 2 ನಿಮಿಷ ಹೆಚ್ಚು ಅಂದರೆ 5 ನಿಮಿಷ ಅಲ್ವ… ಆದ್ರೆ ಈಗ ನಾವು ಹೇಳ್ತಿರೋ ಅವಳಿ ಜವಳಿನ ನೋಡಿ..

ಇವರು 87 ದಿನಗಳ ಅಂತರದಲ್ಲಿ ಜನಿಸಿದ್ದಾರೆ. ನೋಡೋಕೆ ಮುದ್ದು ಮುದ್ದಾಗಿರೋ ಈ ಮಕ್ಕಳು ಸಖತ್ ಕ್ಯೂಟ್.. ಇವರಿಬ್ಬರು ಈಗ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ.. ಇವರಿಬ್ಬರ ಹೆಸರು ಆಮಿ ಮತ್ತು ಕೇಟಿ ಎಂದು… ಈ ಹೆಣ್ಣು ಮಕ್ಕಳು.. ಹುಟ್ಟಿದ ತಕ್ಷಣ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ ಅನ್ನೋದೆ ಆಶ್ಚರ್ಯದ ಸಂಗತಿ.. ಈ ಅವಳಿಗಳನ್ನ ಮಿರಾಕಲ್ ಅವಳಿ ಎಂದೂ ಸಹ ಕರೆಯುತ್ತಾರೆ.. ಈ ಮಕ್ಕಳ ತಾಯಿ ಹೆಸರು ಮರಿಯಾ.. ಆಮಿ ಹುಟ್ಟಿದ ಮೂರು ತಿಂಗಳ ನಂತರ ಕೇಟಿ ಹುಟ್ಟುತ್ತಾಳೆ. ಗಿನ್ನಿಸ್ ರೆರ್ಕಾಡ್ ಮಾಡೋಕೆ ಏನೆಲ್ಲಾ ಮಾಡ್ತಾರೆ.. ಆದರೆ ಇವರು ಹುಟ್ಟಿದ ತಕ್ಷಣ ಗಿನ್ನಿಸ್ ರೆರ್ಕಾಡ್ ಮಾಡಿರೋದು ಆಶ್ಚರ್ಯ ಆದರೂ ಕೂಡ ನಿಜ.

Edited By

Manjula M

Reported By

Manjula M

Comments