ಫೇಸ್ ಬುಕ್ ಗೆ ಸೆಡ್ಡು ಹೊಡೆಯಲು ಬರ್ತಿದೆ ಮತ್ತೊಂದು ಆ್ಯಪ್
ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಿಗೇನು ಬರ ಇಲ್ಲ. ಸಾಕಷ್ಟು ದಿನಗಳಿಂದ ಫೇಸ್ ಬುಕ್ ವಾಟ್ಸ್ಆ್ಯಪ್ ಗಳಲ್ಲಿ ಮಾಹಿತಿ ಸೋರಿಕೆ ಆಗುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದ್ದವು.
ಇದನ್ನೆಲ್ಲಾ ಗಮನದಲ್ಲಿಟ್ಟು ಕೊಂಡು ಡೇಟಾ ಸೋರಿಕೆ ವಿವಾದದ ಬೆನ್ನಲ್ಲೇ ಬಳಕೆದಾರರು ಫೇಸ್ಬುಕ್ ಡಿಲೀಟ್ ಮಾಡಲು ಮುಂದಾಗುತ್ತಿದ್ದಾರೆ. ಗೂಗಲ್ ನ ಮಾಜಿ ಉದ್ಯೋಗಿ ಆರ್ಕುಟ್ ಬೈಕುಕುಕ್ಟೆನ್ ಇದನ್ನೆಲ್ಲಾ ಸದುಪಯೋಗಪಡಿಸಿಕೊಳ್ತಿದ್ದಾರೆ. ಹಿಂದೆ ಇವರು Orkut.com ಅನ್ನು ಕೂಡ ಪರಿಚಯಿಸಿದ್ದರು. ದಶಕಗಳ ಹಿಂದೆ ಇದು ಸೋಶಿಯಲ್ ಮೀಡಿಯಾ ಕ್ಷೇತ್ರದ ಟ್ರೆಂಡ್ ಎನಿಸಿಕೊಂಡಿತ್ತು. ಈಗ ಭಾರತದಲ್ಲಿ ಹಲೋ ಎಂಬ ಹೊಸ ಸಾಮಾಜಿಕ ಜಾಲತಾಣವನ್ನು ಆರ್ಕುಟ್ ಪರಿಚಯಿಸಿದ್ದಾರೆ. ಟೆಸ್ಟ್ ಯೂಸರ್ ಗಳು ಈ ಆಯಪ್ ನಲ್ಲಿ ತಿಂಗಳಿಗೆ 320 ನಿಮಿಷ ವ್ಯಯಿಸಿದ್ದಾರಂತೆ. ಹಾಗಾಗಿ ಹಲೋ ಕೂಡ ಫೇಸ್ಬುಕ್ ನಂತೆ ಜನಪ್ರಿಯತೆ ಪಡೆಯಲಿದೆ ಅನ್ನೋದು ಆರ್ಕುಟ್ ವಿಶ್ವಾಸ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದೆ.
.
Comments