IPL ನೋಡುವವರಿ ಗೆ BSNLನಿಂದ ಬಂಪರ್ ಆಫರ್…!!
ಜಿಯೋ ತನ್ನ ಬಳಕೆದಾರರಿಗೆ ರೂ.251ಕ್ಕೆ 102 GB ಡೇಟಾವನ್ನು ನೀಡಲಿದ್ದು, ಇದು ಸಹ 51 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, IPL ನೋಡುವ ಸಲುವಾಗಿ ಮಾತ್ರವೇ ಈ ಆಫರ್ ನೀಡುತ್ತಿದೆ ಎನ್ನಲಾಗಿದ್ದು, ನಿತ್ಯ ಬಳಕೆದಾರರಿಗೆ 2GB ಡೇಟಾ ದೊರೆಯುತ್ತಿದೆ. ಇದಕ್ಕೆ BSNL ಸೆಡ್ಡು ಹೊಡೆದಿದೆ.
ಹೌದು.., BSNL ಹೊಸ ಆಫರ್ ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ತನ್ನ ಬಳಕೆದಾರರಿಗೆ ಹೊಸ ಮಾದರಿಯಲ್ಲಿ ಹೆಚ್ಚು ಡೇಟಾ ಹೊಂದಿರುವ ಆಫರ್ ಅನ್ನು ನೀಡುತ್ತಿದೆ. ರೂ.258 ಪ್ಲಾನ್ ಘೊಷಣೆ ಮಾಡಿದೆ. ರೂ.258ರ ಪ್ಲಾನ್ ಘೋಷಣೆ ಮಾಡಿರುವ BSNL ಬಳಕೆದಾರರಿಗೆ ನಿತ್ಯ 3GB ಡೇಟಾದಂತೆ 153GB ಡೇಟಾವನ್ನು 51 ದಿನ ಗಳ ವ್ಯಾಲಿಡಿಟಿಗೆ ನೀಡಲಿದೆ ಎನ್ನಲಾಗಿದೆ. BSNL ನೀಡುತ್ತಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಯಾವುದೇ ಕರೆ ಮಾಡುವ ಸೇವೆಯೂ ಲಭ್ಯವಿಲ್ಲ ಎನ್ನಲಾಗಿದೆ. ಇದರ ಬದಲಾಗಿ ಕೇಲವ ಡೇಟಾ ಆಫರ್ ಮಾತ್ರವೇ ದೊರೆಯಲಿದೆ. ಇದು ಲಿಮೆಟೆಡ್ ಆಫರ್ ಆಗಿದ್ದು, ಏಪ್ರಿಲ್ 7 ರಿಂದ ಏಪ್ರಿಲ್ 30ರ ವರೆಗೆ ಮಾತ್ರವೇ ದೊರಯಲಿದೆ ಎನ್ನಲಾಗಿದೆ. ಅದರ ಒಳಗೆ ರಿಚಾರ್ಜ್ ಮಾಡಿಸಿಕೊಂಡವರಿಗೆ ಮಾತ್ರವೇ ಈ ಯೋಜನೆ ಲಾಭ ದೊರೆಯಲಿದೆ ಎನ್ನಲಾಗಿದೆ. ಅಲ್ಲದೇ ಈ ಆಫರ್ ಇಡೀ ಭಾರತದಲ್ಲಿ ಎಲ್ಲಿಗೂ ದೊರೆಯಲಿದೆ. ಎಲ್ಲಾ BSNL ಬಳಕೆದಾರರು ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.
Comments