ಇಂದು ಡಾ.ರಾಜ್ ಅವರ ಹನ್ನೆರಡನೇ ವರ್ಷದ ಪುಣ್ಯ ಸ್ಮರಣೆ

ಕನ್ನಡ ಚಿತ್ರರಂಗ ಎಂದರೆ ಸಾಕು ಎಲ್ಲರಿಗೂ ಮೊದಲಿಗೆ ನೆನಪಾಗೋದೆ ಡಾ. ರಾಜ್.. ಗಾನ ಗಂಧರ್ವ ನಮ್ಮನ್ನ ಅಗಲಿ ಇಂದಿಗೆ 12 ವರ್ಷ ಆದರೂ ಕೂಡ ಇನ್ನೂ ನಮ್ಮ ಜೊತೆ ಜೀವಂತವಾಗಿಯೇ ಇದ್ದಾರೆ ಅನಿಸುತ್ತದೆ. ಕನ್ನಡ ಸಿನಿಮಾರಂಗದ ಆರಾಧ್ಯ ದೈವ, ನಟ ಸಾರ್ವಭೌಮ ಡಾ ರಾಜ್ ಕುಮಾರ್ ಅಪಾರ ಅಭಿಮಾನಿಗಳನ್ನ ಅಗಲಿರುವುದು ಅನೇಕ ಅಭಿಮಾನಗಳ ಪಾಲಿಗೆ ನಂಬಲಾಸಾಧ್ಯವಾದ ತುತ್ತಾಗಿದೆ.
12 ನೇ ವರ್ಷದ ಪುಣ್ಯ ಸ್ಮರಣೆಯನ್ನು ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಆಚರಣೆಯನ್ನು ಮಾಡಲಾಗುತ್ತಿದ್ದು ಡಾ ರಾಜ್ ಕುಟುಂಬಸ್ಥರು ಹಾಗೂ ಸಾಕಷ್ಟು ಕಲಾವಿದರು ಕೂಡ ಈ ಪೂಜೆಯಲ್ಲಿ ಭಾಗಿ ಆಗಲಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಅವರು ನಿಧನರಾಗಿ 11 ತಿಂಗಳುಗಳು ಕಳೆದಿವೆ ಆದ್ದರಿಂದ ಮನೆಯಲ್ಲಿಯೂ ಪ್ರತಿವರ್ಷದಂತೆ ಪುಣ್ಯತಿಥಿ ಆಚರಣೆ ಮಾಡದಿರಲು ರಾಜ್ ಕುಮಾರ್ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಬೆಳ್ಳಿಗ್ಗೆ 9-30 ಸುಮಾರಿಗೆ ಶಿವರಾಜ್ ಕುಮಾರ್ , ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕುಟುಂಬದ ಪ್ರತಿಯೊಬ್ಬರು ಸ್ಮಾರಕದ ಬಳಿ ಆಗಮಿಸಿ ಪೂಜೆಯಲ್ಲಿ ಭಾಗಿ ಆಗಲಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗದ ಮುತ್ತು ಕೋಟಿ ಕೋಟಿ ಅಭಿಮಾನಿಗಳ ಮನಸ್ಸಿನಲ್ಲಿ ಯಾವಾಗಲು ಜೀವಂತ ಎನ್ನುವುದು ಮಾತ್ರ ಸತ್ಯ. ಡಾ.ರಾಜ್ ಅವರ ನೆನಪು ಹಿಂದೆಯು ಅಮರ,ಇಂದಿಗೂ ಅಮರ,ಎಂದೆಂದಿಗೂ ಅಮರ.
Comments