ನೆಚ್ಚಿನ ಶ್ವಾನಕ್ಕಾಗಿ 8 ರಿಂದ 7 ಐಫೋನ್ ಗಳ ಖರೀದಿ
ನಾವು ಮನೆಯಲ್ಲಿ ಸಾಕೋ ಶ್ವಾನಗಳ ಮೇಲೆ ಅತಿಯಾದ ಪ್ರೀತಿ ಇದ್ರೆ ಅದನ್ನ ಮುದ್ದಾಡಿ, ಅದಕ್ಕೆ ಇಷ್ಟವಾಗೋ ಆಹಾರ ನೀಡ್ತೀವಿ. ಆದ್ರೆ ಇಲ್ಲೊಬ್ಬ ವ್ಯಕ್ತಿ ತಾನು ಸಾಕಿರೋ ಶ್ವಾನದ ಬಗ್ಗೆ ತುಂಬಾ ಪ್ರೀತಿ. ಆ ಪ್ರೀತಿಯನ್ನ ಆತ ವ್ಯಕ್ತ ಪಡಿಸೋದೆ ಫುಲ್ ಡಿಫ್ರೆಂಟ್.
ಸಾಮಾನ್ಯವಾಗಿ ನಾವು ಸಾಕೊ ನಮ್ಮ ನೆಚ್ಚಿನ ನಾಯಿ ಮರಿಗೆ ತುಂಬಾನೆ ಪ್ಯಾಂಪರ್ ಮಾಡ್ತೀವಿ. ಅವುಗಳನ್ನ ಅಪ್ಪಿ ಮುದ್ದಾಡ್ತೀವಿ. ಅವುಗಳ ಜೊತೆ ಮುಂಜಾನೆ ಮತ್ತೆ ಸಂಜೆ ಹೊತ್ತಿನಲ್ಲಿ ವಾಕಿಂಗ್ ಹೋಗ್ತೀವಿ. ಅದುಬಿಟ್ರೆ ಅವುಗಳಿಗೆ ಇಷ್ಟ ಆಗೋ ಫುಡ್ ಕೊಡ್ತಿವಿ. ಆದ್ರೆ ಇಲ್ಲೊಬ್ಬ ಭೂಪ ತನ್ನ ನೆಚ್ಚಿನ ಶ್ವಾನಕ್ಕಾಗಿ 8 ರಿಂದ 7 ಐಫೋನ್‍ಗಳನ್ನ ಖರೀದಿ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ. ಹೌದು ಈತನ ಹೆಸರು ವಾಂಗ್ ಸಿಕಾಂಗ್ ಅಂತ. ಚೀನಾ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ವಾಂಗ್ ಜಿಯಾಲಿನ್ ಎಂಬುವವರ ಪುತ್ರ.ವಾಂಗ್ ಸಿಕಾಂಗ್ ತನ್ನ ಮುದ್ದಿನ ನಾಯಿ ಕೊಕೊಗಾಗಿ ಅತಿ ದುಬಾರಿ ಬೆಲೆ ಬಾಳುವ ಐಫೋನ್ 7 ಖರೀದಿಸಿದ್ದಾನೆ. ಒಂದಲ್ಲ ಎರಡಲ್ಲ ಎಂಟು ಮೊಬೈಲ್ ಫೋನ್‍ಗಳನ್ನ ಖರೀದಿಸಿದ್ದಾನೆ. ಈತ ಐಫೋನ್‍ಗಳಿಗಾಗಿ ಖರ್ಚು ಮಾಡಿರೋದನ್ನ ಕೇಳಿದ್ರೆ ನೀವು ಶಾಕ್ ಆಗ್ತೀರ. ಹೌದು ಈ ಎಂಟು ಐಫೋನ್‍ಗಳ ಖರೀದಿಗಾಗಿ 5 ಕೋಟಿ 13 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ ಈ ಮಹಾಶಯ.
ಸಾಲದಕ್ಕೆ ಅವುಗಳನ್ನ ತನ್ನ ಮುದ್ದಿನ ನಾಯಿ ಕೊಕೊ ಪಕ್ಕದಲ್ಲಿಟ್ಟು ಫೋಟೊ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದಾನೆ. ಈ ಹಿಂದೆ ವಾಂಗ್ ಸಿಕಾಂಗ್ ತನ್ನ ಅಲಸ್ಕಾನ್ ಮಲ್ಮೂತ್ ಹಾಗೂ ಕೊಕೊ ಶ್ವಾನಗಳಿಗೆ ದುಬಾರಿ ಬೆಲೆ ಬಾಳುವ ಗಿಫ್ಟ್‍ಗಳನ್ನ ನೀಡಿದ್ದ. ಸಾಲದಕ್ಕೆ 2015ರಲ್ಲಿ ಎರಡು ಸ್ಮಾರ್ಟ್ ಆಪಲ್ ಬಂಗಾರದ ವಾಚ್ ಕೂಡ ಖರೀದಿಸಿದ್ದ. ಅಷ್ಟಲ್ಲದೆ ನಾಯಿ ಹೆಸರಿನಲ್ಲಿ ಆತನ ಸ್ನೇಹಿತರಿಗೆ ಪಾರ್ಟಿ ಸಹ ಕೂಡ್ತಾನೆ. ಎಂತ ಕಾಲ ಬಂತು ಅಂತ ನೀವು ಒಮ್ಮೆ ಯೋಚನೆ ಮಾಡಿ.
Comments