ನಮ್ಮ ದೇಹಕ್ಕೆ ನಿದ್ದೆ ಇಷ್ಟೊಂದು ಮುಖ್ಯನಾ..!
ಹೊಟ್ಟೆ ಹಸಿದುಕೊಂಡು ಎಷ್ಟೊತ್ತು ಇರೋಕಾಗುತ್ತೆ ಹೇಳಿ... ಒಂದು ದಿನ ಎರಡು ದಿನ ಮೂರು ದಿನ... ಆಯ್ತು ಬಿಡಿ ಒಂದು ವಾರ ಇರಬಹುದು..? ಅಥವಾ ಒಂದಿಷ್ಟು ವಾರ ಅನ್ಕೊಳ್ಳಿ... ಆದ್ರೆ ನಿದ್ದೆ ಮಾಡ್ದೆ ಎಷ್ಟು ದಿನ ಇರಬಹುದು ಹೇಳಿ... ನಮ್ಮ ದೇಹಕ್ಕೆ ಆರೋಗ್ಯ ಅನ್ನೋದು ತುಂಬಾನೇ ಮುಖ್ಯ..
ಟೈಮ್ ಟು ಟೈಮ್ ಊಟ ಮಾಡಬೇಕು. ನಿದ್ದೆ ಮಾಡಬೇಕು. ಇಲ್ಲವಾದರೆ ನಮ್ಮ ಆರೋಗ್ಯ ಹಾಳಾಗೋದ್ರಲ್ಲಿ ನೋ ಡೌಟ್. ಆಗಲೇ ನಾನ್ ನಿಮಗೆ ಹೇಳ್ದೆ. ಊಟ ಮಾಡದೆ ಒಂದಿಷ್ಟು ವಾರ ಬದುಕಬಹುದು. ಆದರೆ ನಿದ್ದೆ ಇಲ್ಲದೆ ಎಷ್ಟು ದಿನ ಬದುಕೋಕೆ ಆಗುತ್ತೆ ಅನ್ನೋದು ನಿಮಗೆ ಗೊತ್ತಾ.ಒಂದು ದಿನ ಎರಡು ದಿನ ಮೂರು ದಿನ. ಸುಮಾರು ನಿದ್ದೆ ಇಲ್ಲದೆ 11 ದಿನ ಬದುಕಬಹುದು.ಆಮೇಲೆ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಕುಗ್ಗುತ್ತವೆ. ನಂತರ ಸಾವು ಕಟ್ಟಿಟ್ಟಬುತ್ತಿ . ಆದ್ದರಿಂದ ಎಷ್ಟೆ ಯೋಚನೆ ಇದ್ದರೂ ಕೂಡ ಸರಿಯಾದ ಸಮಯಕ್ಕೆ ಊಟ ಮಾಡಬೇಕು. ಸರಿಯಾದ ಸಮಯಕ್ಕೆ ನಿದ್ದೆ ಮಾಡಬೇಕು.ಏಕೆಂದರೆ ಆರೋಗ್ಯವೇ ಭಾಗ್ಯ ಅನ್ನೋದನ್ನ ಮರೆಯಬಾರದು.
Comments