ಜಾಮೀನಿನ ಮೇಲೆ ಹೊರಗೆ ಬಂದ ಕಿನ್ನರಿಯ ನಕುಲ್ ಅಲಿಯಾಸ್ ಕಿರಣ್ ರಾಜ್

ಇತ್ತಿಚಿಗಷ್ಟೆ ಕಿನ್ನರಿಯ ಧಾರವಾಹಿಯ ಹೀರೋ ನಕುಲ್ ಮಾಡೆಲ್ ಒಬ್ಬರಿಗೆ ವಂಚಿಸಿ ಹಾಗೂ ಹಲ್ಲೆ ಮಾಡಿದ ಕಾರಣ ವಿಲನ್ ಆಗಿ ಜೈಲು ಸೇರಿದ್ರು.. ಆದರೆ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಕಿರಣ್ ರಾಜ್ ಮೇಲೆ ಮುಂಬೈ ಮೂಲದ ಮಾಡೆಲ್ ಒಬ್ಬರು ತನ್ನ ಜೊತೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದು, ಇದೀಗ ಮದುವೆಯಾಗುವುದಿಲ್ಲ ಎಂದು ವಂಚನೆ ಮಾಡಿದ್ದಲ್ಲದೆ ತನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ ಕಿರಣ್ ವಿರುದ್ಧ ದೂರು ದಾಖಲಿಸಿದ್ದರು. ಈ ವಿಷಯವಾಗಿ ನಟ ಕಿರಣ್ ರಾಜ್ ಅವರನ್ನು ರಾಜರಾಜೇಶ್ವರಿ ನಗರದ ಪೊಲೀಸರು ಬಂಧಿಸಿದ್ದರು.ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದ ನಟ ಕಿರಣ್ ರಾಜ್ ಅವರನ್ನು ರಾಜರಾಜೇಶ್ವರಿ ನಗರದ ಪೊಲೀಸರು ಸೋಮವಾರ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಕಿರಣ್ ರಾಜ್ ಅವರಿಗೆ ಷರತ್ತು ಬದ್ಧ ಜಾಮೀನನ್ನ ನೀಡಲಾಗಿದೆ
Comments