ನಿಮ್ಮ ಸ್ಯಾಲರಿ ಸ್ಲಿಪ್ ನಲ್ಲಿ ಗಮನಿಸಲೇಬೇಕಾದ ಅಂಶಗಳು

ನಾವು ಕೆಲಸ ಮಾಡುವ ಸಂಸ್ಥೆಗಳ ಮಾಲೀಕರಿಂದ ಸ್ವೀಕರಿಸುವ ಒಂದು ದಾಖಲೆಯೇ ಈ ಸ್ಯಾಲರಿ ಸ್ಲಿಪ್. ಈ ಸ್ಯಾಲರಿ ಸ್ಲಿಪ್ ಅನ್ನು ಪ್ರತಿ ತಿಂಗಳು ಕೂಡ ನೀಡುತ್ತಾರೆ. ಈ ಸ್ಲಿಪ್ ನಲ್ಲಿ ಎಲ್ಲಾ ರೀತಿಯ ಸಮಗ್ರ ಚಿತ್ರಣವು ಕೂಡ ಸಿಗುತ್ತದೆ. ಮೂಲ ವೇತನ ಭತ್ಯೆ ,ವೈದ್ಯಕೀಯ ಭತ್ಯೆ ಪಿಎಫ್ ,ತೆರಿಗೆ ಕಡಿತ ಹೀಗೆ ಎಲ್ಲವೂ ಇರುತ್ತದೆ.
ಉದ್ಯೋಗಿಗಳು ಪಡೆಯುವ ಒಟ್ಟು ಸಂಬಳದಲ್ಲಿ ಕಡಿತವಾಗಿ ಎಷ್ಟು ನಿವ್ವಳ ವೇತನ ಪಡೆಯುತ್ತಿರಿ ಎಂಬುದನ್ನು ಈ ಸ್ಯಾಲರಿ ಸ್ಲಿಪ್ ತೋರಿಸುತ್ತದೆ. ಉದ್ಯೋಗಿಗಳು ಕೆಲಸವನ್ನು/ಸಂಸ್ಥೆಯನ್ನು ಬದಲಾಯಿಸುವಾಗ ಸ್ಯಾಲರಿ ಸ್ಲಿಪ್ ಬಗ್ಗೆ ಸರಿಯಾಗಿ ಅರಿತುಕೊಳ್ಳುವುದು ಮುಖ್ಯವಾಗಿರುತ್ತದೆ. ಹಾಗಾಗಿ ಸ್ಯಾಲರಿ ಸ್ಲಿಪ್ ಬಗ್ಗೆ ಕೆಲವೊಂದಿಷ್ಟು ಮಾಹಿತಿಗಳು ನಿಮಗಾಗಿ.
ಗೃಹ ಬಾಡಿಗೆ ಭತ್ಯೆ:- ಗೃಹ ಬಾಡಿಗೆ ಭತ್ಯೆ ಎನ್ನುವುದು ಮನೆ ಬಾಡಿಗೆಯನ್ನು ಕಟ್ಟಲು ನೀಡಿದ ಪ್ರಯೋಜನಕಾರಿ ಅಂಶವಾಗಿದೆ. ನಗರಗಳಿಗೆ ಅನುಗುಣವಾಗಿ ಶೇಕಡಾವಾರು ಗೃಹ ಬಾಡಿಗೆ ಭತ್ಯೆ(HRA) ಅವಲಂಬಿತವಾಗಿರುತ್ತದೆ. ಮೇಟ್ರೋ ನಲ್ಲಿ ವಾಸಿಸುವವರಾದರೆ ವೇತನದಲ್ಲಿ ಶೇ. 50ರಷ್ಟು ಅಥವಾ ಶೇ. 40ರಷ್ಟು ಸಂಬಳ ಅರ್ಹವಾಗಿರುತ್ತದೆ.
ಮೂಲ ವೇತನ:- ಸ್ಯಾಲರಿ ಸ್ಲಿಪ್ ನಲ್ಲಿ ಮೂಲ ವೇತನ ಎನ್ನುವುದು ತುಂಬಾ ಪ್ರಮುಖ ಅಂಶ. ಸಂಬಳದ ಒಟ್ಟು ಮೊತ್ತದಲ್ಲಿ ಅತಿ ಹೆಚ್ಚಿನ ಪ್ರಮಾಣವನ್ನು ಮೂಲ ವೇತನದ ರೂಪದಲ್ಲಿ ಉದ್ಯೋಗಿಗಳು ಪಡೆಯುತ್ತಿರುತ್ತಾರೆ. ವ್ಯಕ್ತಿಗಳ ವೇತನದ ಆಧಾರದ ಮೇಲೆ ಶೇಕಡವಾರು ಬದಲಾಗುತ್ತದೆ. ಮೂಲ ವೇತನದ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ಉದ್ಯೋಗಿಗಳು ಮುಖ್ಯವಾಗಿ ಗಮನಿಸಬೇಕಾಗುತ್ತದೆ.
ವೈದ್ಯಕೀಯ ಭತ್ಯೆ :-ಉದ್ಯೋಗದಾತ ಸಂಸ್ಥೆ ತನ್ನ ನೌಕರರಿಗೆ ನೀಡುವ ನಿರ್ಧಿಷ್ಟ ಪ್ರಮಾಣದ ಮೊತ್ತವೇ ವೈದ್ಯಕೀಯ ಭತ್ಯೆ ವೈದ್ಯಕೀಯ ಭತ್ಯೆ ಮೇಲೆ ತೆರಿಗೆಯನ್ನು ಕೂಡ ವಿಧಿಸಲಾಗುತ್ತದೆ. ಕಾಲ ಕಾಲಕ್ಕೆ ವೈದ್ಯಕೀಯ ಬಿಲ್ ಗಳನ್ನು ಸಂಸ್ಥೆಗೆ ಸಲ್ಲಿಸಿದರೆ ರೂ. 15,000 ವರೆಗಿನ ಮೊತ್ತಕ್ಕೆ ಈ ತೆರಿಗೆಯು ಅನ್ವಯವಾಗುವುದಿಲ್ಲ.
ರಜೆ ಭತ್ಯೆ:- ಪ್ರಯಾಣ ಭತ್ಯೆ ಎನ್ನುವುದು ಉದ್ಯೋಗದಾತ ಸಂಸ್ಥೆ ತನ್ನ ನೌಕರರಿಗೆ ನೀಡುವ ಒಂದು ವಿಧದ ಸಂಭಾವನೆಯಾಗಿದೆ.
ಭವಿಷ್ಯ ನಿಧಿ:- ಮಾಸಿಕ ಆಧಾರದಲ್ಲಿ ನಿಮ್ಮ ಮೂಲ ವೇತನದಿಂದ ಶೇ. 12ರಷ್ಟು ಪ್ರಾವಿಡೆಂಟ್ ಫಂಡ್ ನಿಮ್ಮ ಇಪಿಎಫ್ ಖಾತೆಗೆ ಜಮಾ ಆಗುತ್ತದೆ. ಇದೇ ಪ್ರಮಾಣದ ಮೊತ್ತ ನಿಮ್ಮ ಉದ್ಯೋಗದಾತರಿಂದ ನಿಮ್ಮ ಖಾತೆಗೆ ಬರುತ್ತದೆ.
Comments