ನಿಮ್ಮ ಮನೆಯ ಮುಂದೆ ಕುದುರೆ ಲಾಳ ನೇತು ಹಾಕುವುದರಿಂದ ಎಷ್ಟು ಲಾಭ ಗೊತ್ತಾ?

ಸಾಮಾನ್ಯವಾಗಿ ಮನೆಗಳಿಗೆ ಯಾವುದೆ ರೀತಿಯ ದೃಷ್ಟಿಗಳು ಆಗಬಾರದು ಎಂದು ಕೆಲವೊಂದು ವಸ್ತಗಳನ್ನ ಗೋಡೆಗೆ ನೇತು ಹಾಕಿರುತ್ತಾರೆ.ಅದರಲ್ಲಿ ಕುದುರೆ ಲಾಳವು ಒಂದು. ಕುದುರೆ ಲಾಳವನ್ನು ನಾವು ಸಾಕಷ್ಟು ಜನರ ಮನೆಯಲ್ಲಿ ನೋಡಿರುತ್ತೇವೆ. ಆದರೆ ಅದನ್ನ ಯಾಕೆ ಹಾಕಿಕೊಂಡಿರುತ್ತಾರೆ ಅನ್ನೋದು ಯಾರಿಗೂ ಕೂಡ ತಿಳಿದಿರುವುದಿಲ್ಲ.ಯಾಕೆ ಹಾಕಿರುತ್ತಾರೆ ಅನ್ನುವುದಕ್ಕೆ ಈ ಲೇಖನ ಓದಿ.
ಕುದುರೆ ಲಾಳವನ್ನು ಹಾಕುವುದರಿಂದ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ದೂರವಾಗಿ ಪಾಸಿಟಿವ್ ಎನರ್ಜಿ ಮನೆಯಲ್ಲಿ ಬರುತ್ತದೆ ಎನ್ನಲಾಗುತ್ತದೆ. ಇದನ್ನು ಮನೆಯ ಮುಂದಿನ ಬಾಗಿಲಿನ ಮೇಲೆ ತೂಗು ಹಾಕಿದರೆ ಮನೆಯಲ್ಲಿ ಭಾಗ್ಯ ಹೆಚ್ಚಾಗುತ್ತದೆ ಹಾಗೂ ಸಕರಾತ್ಮಕತೆ ತುಂಬಿಕೊಳ್ಳುತ್ತದೆ ಎನ್ನಬಹುದು.ಕುದುರೆ ಲಾಳವನ್ನು ಪವಿತ್ರ ವಸ್ತು ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಇರುವವರಿಗೆ ಸಂತೋಷದ ಜೊತೆಗೆ ನೆಮ್ಮದಿ ಕೂಡ ಸಿಗುತ್ತದೆ. ನಿಮ್ಮ ಮನೆಯಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದರೆ ಈ ಲಾಳವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ದವಸಧಾನ್ಯಗಳನ್ನು ಸಂಗ್ರಹಿಸಿಡುವ ಜಾಗದಲ್ಲಿ ಒಂದು ಡಬ್ಬದಲ್ಲಿ ಹಾಕಿಟ್ಟರೆ ಸಮಸ್ಯೆಗಳು ದೂರವಾಗುತ್ತವೆ.ಕುದುರೆಲಾಳವನ್ನು ನಿಮ್ಮ ಮನೆಯ ಕಬೋರ್ಡ್ ನಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ನಿಮ್ಮ ಮನೆಗೆ ಯಾವುದೆ ರೀತಿಯ ದೃಷ್ಟಿ ಕೂಡ ಆಗುವುದಿಲ್ಲ.
Comments