ಈ ವ್ಯಕ್ತಿ ಕೊಂಚ ಡಿಫರೆಂಟ್..! ಹೇಗೆ ಅಂತಿರಾ..ನೀವೆ ಓದಿ
ಇತ್ತಿಚಿನ ಟ್ರೆಂಡ್ ಗಳಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿರೋದು ಎಂದರೆ ಟ್ಯಾಟು.. ಎಲ್ಲರೂ ಕೂಡ ಟ್ಯಾಟುನ ತುಂಬಾ ಇಷ್ಟ ಪಡ್ತಾರೆ.. ಅಚ್ಚೆ ಹಾಕಿಸಿಕೊಳ್ಳೋದು ಈಗ ಎಲ್ಲಾ ಕಡೆ ಕಾಮನ್ ಆಗಿದೆ. ಅದು ತನ್ನ ಪ್ರೇಮಿಯ ಹೆಸರು, ಮತ್ತೆ ಕೆಲವರು ದೇವರ ಹೆಸರಲ್ಲಿ ಅಚ್ಚೆ ಹಾಕಿಸಿಕೊಳ್ತಾರೆ
ಇವರನ್ನ ಎಲ್ಲಾ ಕಡೆ ನೋಡಿ, ಏನಪ್ಪಾ ಇವರು ಅಚ್ಚೆನ ಹಿಂಗೆ ಹಾಕ್ಸಿಕೊಂಡಿದ್ದಾರೆ ಅಂತ ಮನಸಿನಲ್ಲೇ ಅಂದುಕೊಳ್ತೀವಿ. ಒಮ್ಮೆ ಈ ವ್ಯಕ್ತಿಯನ್ನ ನೋಡಿ. ಮುಖದ ಮೇಲೆ ಫುಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇವರ ಹೆಸರು ಟೆಡ್ ರಿಚರ್ಡ್ ಅಂತ. ಇವರಿಗೆ ಈಗ 58 ವರ್ಷ. ಇವರಿಗೆ ಟ್ಯಾಟೂ ಎಂದರೆ ವಿಪರೀಪ ಇಷ್ಟ. ಅಚ್ಚೆ ಹಾಕಿಸಿಕೊಳ್ಳೋರು ಎಲ್ಲಾ ಕಡೆ ಕಂಡು ಬತಾರೆ. ಮೈತುಂಬಾ ಅಚ್ಚೆ ಹಾಕಿಸಿಕೊಳ್ಳೋರನ್ನ ನಾವು ನೊಡಿರ್ತೀವಿ. ಆದ್ರೆ ಬ್ರಿಸ್ಟೋಲ್‍ನ ಟೆಡ್ ರಿಚರ್ಡ್ ಎಂಬ ವ್ಯಕ್ತಿ ಗಿಳಿಯಂತೆ ಕಾಣಲೂ ತುಂಬಾ ಸರ್ಕಸ್ ಮಾಡಿ ಸಕ್ಸಸ್ ಆಗಿದ್ದಾರೆ. ಬ್ರಿಸ್ಟೋಲ್‍ನ ಟೆಡ್ ರಿಚರ್ಡ್ ಎಂಬ ವ್ಯಕ್ತಿ ಗಿಳಿಯಂತೆ ಕಾಣಲೂ ಟ್ಯಾಟೂ ಮೋರೆ ಹೋಗಿದ್ದಾನೆ..ಇವರು ಏನಿಲ್ಲಾ ಅಂದ್ರ 110 ಹಚ್ಚೆಗಳನ್ನ ತಮ್ಮ ಮೈ ಮೇಲೆ ಇಳಿಸಿಕೊಂಡಿದ್ದಾರೆ. ಇವರು ಗಿಳಿಯಂತೆ ಕಾಣಬೇಕು ಎಂಬ ಉದ್ದೇಶದಿಂದ ಮುಖದ ಮೇಲೆಲ್ಲಾ ಫುಲ್ ಗಿಳಿಯ ಟ್ಯಾಟೂಗಳನ್ನ ಹಾಕಿಸಿಕೊಂಡಿದ್ದಾರೆ. ಇದಕ್ಕೆ ಟೆಡ್ ರಿಚರ್ಡ್ ತುಂಬಾ ಸರ್ಕಸ್ ಮಾಡಿದ್ದಾರಂತೆ. ಸಾಲದಕ್ಕೆ ತಮ್ಮ ಎರಡು ಕಿವಿಗಳನ್ನ ಕೂಡ ಕತ್ತರಿಸಿಕೊಂಡಿದ್ದಾರೆ. 1976ರಿಂದ ಇಲ್ಲಿಯ ತನಕ ಅಚ್ಚೆಗಳನ್ನ ಹಾಕಿಸಿಕೊಳ್ತಿದ್ದಾರೆ.
Comments