ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ನೋಡಿ ನಿಮಗೊಂದು ಬಂಪರ್ ಆಫರ್...!!

ಪೇಟಿಎಂ ಗ್ರಾಹಕರನ್ನು ಬ್ಯುಸಿನೆಸ್ ಪಾರ್ಟನರ್ ಮಾಡಿಕೊಂಡು ಯುವಜನತೆಗೆ ಗಳಿಕೆಗೆ ಅವಕಾಶ ಮಾಡಿಕೊಡ್ತಿದೆ. ಹಳೆ ಹಾಗೂ ಹೊಸ ಎರಡೂ ಉದ್ಯಮಕ್ಕೆ ನೀವು ಪೇಟಿಎಂ ಸಹಾಯ ಪಡೆಯಬಹುದಾಗಿದೆ.
ಪೇಟಿಎಂ ತನ್ನ ಪೇಮೆಂಟ್ ಬ್ಯಾಂಕಿಂಗ್ ಶುರು ಮಾಡಿದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ದೇಶದ ಮೂಲೆ ಮೂಲೆಗೆ ತಲುಪಿಸಲು ದೇಶದಾದ್ಯಂತ ಏಜೆಂಟರ್ ಗಳನ್ನು ನೇಮಕ ಮಾಡ್ತಿದೆ. ಅವ್ರನ್ನು ಪೇಟಿಎಂ ಪೇಮೆಂಟ್ ಬ್ಯಾಂಕಿಂಗ್ ಬಿಸಿ ಏಜೆಂಟ್ ಎಂದು ಕರೆಯಲಾಗ್ತಿದೆ. ಈ ಏಜೆಂಟರ್ ಗಳು ಪೇಟಿಎಂ ಉತ್ಪನ್ನಗಳನ್ನು ಮಾರಾಟ ಮಾಡಬೇಕು.
ಪೇಟಿಎಂ ಏಜೆಂಟರ್ ಗಳಿಗೆ ಉತ್ತಮ ಸಂಬಳ ನೀಡುತ್ತದೆ. ಪೇಟಿಎಂ ಏಜೆಂಟ್ ಆಗಲು ಹೂಡಿಕೆ ಮಾಡಬೇಕಿಲ್ಲ. ಆಂಡ್ರಾಯ್ಡ್ ಮೊಬೈಲ್ ಜೊತೆ ಬಯೋಮೆಟ್ರಿಕ್ ಸಾಧನವಿದ್ರೆ ಸಾಕು. ನಿಮ್ಮಲ್ಲಿ ಎಷ್ಟು ನಗದಿದೆಯೋ ಅಷ್ಟರಲ್ಲಿಯೇ ಕೆಲಸ ಶುರು ಮಾಡಬಹುದು. ಪೇಟಿಎಂ, ಪೇಟಿಎಂ ಮಾಲ್ ಹೆಸರಿನಲ್ಲಿ ಆನ್ಲೈನ್ ಸೇವೆ ನೀಡ್ತಿದೆ. ಪೇಟಿಎಂ ಉತ್ಪನ್ನಗಳ ಸೇಲರ್ ಆಗಿ ನೀವು ಗಳಿಕೆ ಮಾಡಬಹುದು. ನಿಮ್ಮ ಉತ್ಪನ್ನಗಳನ್ನು ಕೂಡ ನೀವು ಪೇಟಿಎಂ ಮೂಲಕ ಮಾರಾಟ ಮಾಡಬಹುದು. ಇದ್ರ ಬಗ್ಗೆ https://paytm.com/offer/bc-faqs ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದ್ದು, ಆಸಕ್ತರು ಇದ್ರ ಸಹಾಯ ಪಡೆಯಬಹುದಾಗಿದೆ.
Comments