ವಿಮಾನಗಳು ಬಿಳಿ ಬಣ್ಣದಲ್ಲಿ ಇರುತ್ತವೆ ಯಾಕೆ ಗೊತ್ತಾ?

09 Apr 2018 12:20 PM | General
689 Report

ನೀವೆಲ್ಲಾ ಸಾಮಾನ್ಯವಾಗಿ ವಿಮಾನವನ್ನು ನೋಡೆ ಇರ್ತೀರಾ.. ಚಿಕ್ಕ ವಯಸ್ಸಿನಲ್ಲಿ ವಿಮಾನ ಹೋಗುವ ಶಬ್ದ ಕೇಳಿದರೆ ಸಾಕು.. ಏನೆ ಕೆಲಸ ಇದ್ದರೂ ಕೂಡ ಬಿಟ್ಟು ಬಂದು ಆಕಾಶದತ್ತ ಮುಖ ಮಾಡುತ್ತಾ ವಿಮಾನವನ್ನೆ ದಿಟ್ಟಿಸಿ ನೋಡುತ್ತಿದ್ದೆವು. ಆಗ ಮನಸ್ಸಿಗೆ ಏನೋ ಒಂಥರಾ ಖುಷಿ ಆಗುತ್ತಿತ್ತು.. ಚಿಕ್ಕವರೆ ಯಾಕೆ ದೊಡ್ಡವರು ಕೂಡ ವಿಮಾನದ ಶಬ್ದ ಕೇಳಿದ್ರೆ ಹೊರಗಡೆ ಬಂದು ನೋಡ್ತಾರೆ…

ಯಾಕೆ ವಿಮಾನದ ಬಗ್ಗೆ ಕಥೆ ಹೇಳ್ತಿದ್ದಾರೆ ಅನ್ಕೋಂಡ್ರ.. ವಿಮಾನ ಮೇಲೆ ಹಾರಾಡುವಾಗ ತುಂಬ ಚಿಕ್ಕದಾಗಿ ಕಾಣಿಸುತ್ತದೆ. ಆದರೆ ಕೆಳಗೆ ಬಂದಾಗ  ಅಯ್ಯೋ ಇಷ್ಟೊಂದು ದೊಡ್ಡದಾ ಅನಿಸುತ್ತದೆ.ದೊಡ್ಡ ದೊಡ್ಡ ರೆಕ್ಕೆಗಳು ಅದರ ಮೇಲೊಂದು ದೊಡ್ಡ ಪ್ಯಾನ್  ಇರುತ್ತದೆ.  1903 ರಲ್ಲಿ ವ್ರೈಟ್ ಸಹೋದರರು ವಿಮಾನವನ್ನು ಕಂಡುಹಿಡಿದರು. ಈ ವಿಮಾನಗಳು ಎಲ್ಲವೂ ಕೂಡ ಬಿಳಿ ಬಣ್ಣದಿಂದ ಕೂಡಿರುತ್ತದೆ.  ಆದರೆ ನಾವು ನೀವೆಲ್ಲಾ ನೋಡುವ ಎಲ್ಲಾ ವಿಮಾನಗಳು ಕೂಡ ಬಿಳಿ ಬಣ್ಣದಲ್ಲೆ ಇರುತ್ತದೆ.. ಆದರೆ ನಮಗೆ ಆಗ ಒಂದು ಪ್ರಶ್ನೆ ಮೂಡುತ್ತದೆ. ಯಾಕೆ ಎಲ್ಲಾ ವಿಮಾನಗಳಿಗೂ ಬಿಳಿ ಬಣ್ಣವನ್ನು ಹಚ್ಚಿರುತ್ತಾರೆ  ಅಂತ.. ಆ ಪ್ರಶ್ನೆಗೆ ಈಗ ಉತ್ತರ ಹೇಳ್ತೀವಿ ಕೇಳಿ.ರೆಕ್ಕೆಗಳು ಮಾತ್ರ ಸ್ವಲ್ಪ ವಿಭಿನ್ನ ಬಣ್ಣದಿಂದ  ಕಂಡರೆ  ಮಿಕ್ಕಿದೆಲ್ಲಾ ಬಿಳಿ ಬಣ್ಣದಿಂದಲೇ ಕೂಡಿರುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೂ ಕೂಡ ಇದೆ. ಆ ಕಾರಣ ಇಷ್ಟೆ.  ಬಿಳಿಯ ಬಣ್ಣವು ದೀರ್ಘಬಾಳಿಕೆಯು ಬರುತ್ತದೆ. ಅಷ್ಟೆ ಅಲ್ಲದೆ ಬಿಳಿಯ ಬಣ್ಣಕ್ಕೆ ತಗಲುವ ಖರ್ಚು ಕೂಡ ಕಡಿಮೆ ಇರುತ್ತದೆ. ಬಿಳಿಯ ಬಣ್ಣವು  ಬಿಸಿಲಿಗೆ ಹೆಚ್ಚು ಮಾಸಿ ಹೋಗುವುದಿಲ್ಲ.. ಆದರೆ ಬೇರೆ ಬಣ್ಣಗಳು ಬಿಸಿಲಿನ ತಾಪಮಾನಕ್ಕೆ  ಬೇಗ ಕಳೆಗುಂದುತ್ತವೆ. ಆಗ ಮತ್ತೆ ಬಣ್ಣವನ್ನು ಹಚ್ಚಬೇಕಾಗುತ್ತದೆ. ಇದರಿಂದ ಮತ್ತೆ ಹೆಚ್ಚು ಖರ್ಚು ಬೀಳುತ್ತದೆ. ಬಿಳಿಯ ಬಣ್ಣದ ವಿಮಾನಗಳ ನಿರ್ವಹಣೆಯು ತುಂಬಾ ಸುಲಭವಾಗಿರುತ್ತದೆ. ಹಾಗಾಗಿ ವಿಮಾನಗಳಿಗೆ ಬಿಳಿಯ ಬಣ್ಣವೇ ಹೆಚ್ಚು ಸೂಕ್ತವಾಗಿರುತ್ತದೆ.

ರೀತಿಯ ಬಣ್ಣಗಳು ಸೂರ್ಯನ ಕಿರಣಕ್ಕೆ ಹಾಗೂ  ಸೂರ್ಯನ ತಾಪಾಮಾನಕ್ಕೆ ಕಳೆಗುಂದುತ್ತವೆ. ಇದರಿಂದ ವಿಮಾನದಲ್ಲಿ ತಾಪಮಾನವು ಹೆಚ್ಚಾಗಿ ವಿಮಾನಗಳಲ್ಲಿರುವ ಏ ಸಿಗಳು ಕಾರ್ಯ  ನಿರ್ವಹಿಸುವಲ್ಲಿ ವಿಫಲವಾಗುತ್ತವೆ.  ಇದರಿಂದ ವಿಮಾನದ ಒಳಗೆ ತಾಪಮಾನವು ಹೆಚ್ಚಾಗಿ ಸೆಕೆಯು ಹೆಚ್ಚಾಗುತ್ತದೆ.  ಬಿಳಿ ಬಣ್ಣವು ತಾಪಮಾನಗಳಿಂದ ವಿಮಾನವನ್ನು ರಕ್ಷಿಸುತ್ತವೆ. ವಿಮಾನದಲ್ಲಿ ಯಾವುದೇ ದೋಷಗಳು ಕಂಡು ಬಂದರೆ  ಬಹು ಬೇಗ ಗಮನಕ್ಕೆ ಬರುತ್ತದೆ.  ವಿಮಾನದಲ್ಲಿ ಸಣ್ಣ ಬಿರುಕು ಕಂಡು ಬಂದರೂ ಕೂಡ ಬೇಗ ಗೋಚರಿಸುತ್ತದೆ. ಒಂದು ವೇಳೆ ವಿಮಾನವನ್ನು ಮಾರಾಟ ಮಾಡುವ ಸಂದರ್ಭ ಬಂದರೂ ಕೂಡ ವಿಮಾನದ ಮೇಲಿರುವ ಸಾಂಕೇತಿಕ ಚಿಹ್ನೆಗಳನ್ನು ಬದಲಿಸಿಕೊಂಡರೆ ಸಾಕು.. ಬಣ್ಣ ಬದಲಿಸಿಕೊಳ್ಳುವ ಅನಿವಾರ್ಯತೆಯೇ ಇರುವುದಿಲ್ಲ. ಇಷ್ಟೆಲ್ಲಾ ಕಾರಣಕ್ಕಾಗಿಯೇ  ವಿಮಾನಕ್ಕೆ ಬಿಳಿ ಬಣ್ಣವನ್ನು ಹಚ್ಚಿರುತ್ತಾರೆ.  ನೀವು ಯಾವಾಗಲಾದರೂ ವಿಮಾನದಲ್ಲಿ ಹೋದರೆ ಈ ಮೇಲಿನ  ಅಂಶಗಳನ್ನು ಒಮ್ಮೆ ಗಮನಿಸಿ.. ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಿ.

 

Edited By

Manjula M

Reported By

Manjula M

Comments