ಮೆಟ್ರೋ ಪ್ರಯಾಣಿಕರಿಗೊಂದು ಗುಡ್ ನ್ಯೂಸ್
ಬ್ಯಾಂಕಿಂಗ್ ಹಾಗೂ ಮೆಟ್ರೋ ಪ್ರಯಾಣಕ್ಕೂ ಬಳಸಬಹುದಾದ ಕಾಂಬೋ ಕಾರ್ಡ್ ಯೋಜನೆಗೆ ಶೀಘ್ರ ಮತ್ತೊಂದು ಬ್ಯಾಂಕ್ ಸೇರಲಿದೆ. ಡೆಬಿಟ್ ಕಾರ್ಡ್ ಗಳನ್ನು ನಮ್ಮ ಮೆಟ್ರೋ ಪ್ರಯಾಣಕ್ಕೂ ಬಳಸುವ ಯೋಜನೆಗೆ ಬೆಂಗಳೂರು ಮೆಟ್ರೋ ನಿಗಮ ಹೆಚ್ಚು ಒತ್ತನ್ನ ನೀಡಿದ್ದು ಪ್ರಸ್ತುತ ಫೆಡರಲ್ ಮತ್ತು ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆಲ್ಲಾ ಕಾಂಬೋಕಾರ್ಡ್ ನೀಡುತ್ತಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಈ ಯೋಜನೆಯಲ್ಲಿ ಪಾಲುದಾರಿಕೆ ಪಡೆಯಲು ಮುಂದೆಬಂದಿದೆ..
ಈಗಾಗಲೇ 38 ಮೆಟ್ರೋ ನಿಲ್ದಾಣಗಳಲ್ಲಿ 66 ಎಟಿಎಂ ಸ್ಥಾಪನೆಗೆ ಬಿಎಂಆರ್ ಸಿಎಲ್ ಜತೆ ಎಸ್‌ಬಿಐ ಒಪ್ಪಂದ ಮಾಡಿಕೊಂಡಿತ್ತು. ಇದೇ ಸಂದರ್ಭದಲ್ಲಿ ಎಸ್‌ಬಿಐ-ಮೆಟ್ರೋ ಕಾಂಬೋ ಕಾರ್ಡ್ ಜಾರಿ ಕುರಿತು ನಿಗಮದ ಎಂಡಿ ಮತ್ತು ಎಸ್‌ಬಿಐ ಪ್ರಧಾನ ವ್ಯವಸ್ಥಾಪಕರು ಚರ್ಚೆಯನ್ನು ಕೂಡ ನಡೆಸಿದ್ದಾರೆ.ಪ್ರತಿ ಸ್ಮಾರ್ಟ್ ಕಾರ್ಡ್ ತಯಾರಿಗೆ ಬಿಎಂಆರ್ ಸಿಎಲ್ 60.15 ರೂ ವೆಚ್ಚ ಮಾಡುತ್ತಿತ್ತು. ಒಂದು ವೇಳೆ ಕಾಂಬೋ ತಯಾರಾದರೆ ನಿಗಮಕ್ಕೆ ಆರ್ಥಿಕ ಹೊರೆ ಬೀಳುವುದಿಲ್ಲ ಎಮದು ಹೇಳಬಹುದಾಗಿದೆ. ಬದಲಾಗಿ ಬ್ಯಾಂಕ್ ಗಳೇ ತನ್ನ ಗ್ರಾಹಕರನ್ನು ಆಕರ್ಷಿಸಿ ಕಾರ್ಡ್ ವಿತರಿಸಬೇಕು. ಹೆಚ್ಚಿನ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಮತ್ತು ಕಾಂಬೋ ಕಾರ್ಡ್ ಬಳಸಿದರೆ ಅಷ್ಟೇ ಲಾಭ ನಿಗಮಕ್ಕೆ ಆಗಲಿದೆ. ಈ ಯೋಜನೆ ಶೀಘ್ರ ಜಾರಿಗೆ ಬಂದರೆ ಎಲ್ಲರಿಗೂ ಕೂಡ ಉಪಯೋಗವಾಗಲಿದೆ.
Comments