ಅತ್ಯಂತ ವಿಷಕಾರಿ ಹಾವುಗಳ ಬಗ್ಗೆ ನಿಮಗೆಷ್ಟು ಗೊತ್ತು?
ಹಾವುಗಳು ಅಂದರೆ ಎಲ್ಲರಿಗೂ ಕೂಡ ಭಯವೇ.. ಹಾವುಗಳು ಒಂದು ವೇಳೆ ಕಚ್ಚಿದರೆ ಬದುಕುಳಿಯುವುದು ಕಷ್ಟವೇ ಸರಿ. ಆದ್ದರಿಂದ ಹಾವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ನಿಮಗೆ ಗೊತ್ತಿಲ್ಲದ ವಿಷಪೂರಿತ ಹಾವುಗಳ ಬಗೆಗಿನ ಮಾಹಿತಿ ಈ ಲೇಖನದಲ್ಲಿದೆ.
ಬೆಲ್ಚರಿ ಸೀ ಸ್ನೇಕ್...ಸಾಮಾನ್ಯವಾಗಿ ಈ ಹಾವು ಸಮುದ್ರದ ತೀರಗಳಲ್ಲಿ, ಸಮುದ್ರದ ಆಳಗಳಲ್ಲಿ ಕಾಣಿಸುತ್ತದೆ. ಇದು ಎಲಾಪಿಡ್ ಸಮುದ್ರ ಹಾವಿನ ವಿಷಪೂರಿತ ಜಾತಿಯಾಗಿದೆ. ಇದು ತುಂಬಾ ಸಂಕೋಚದ ಸ್ವಭಾವವನ್ನು ಹೊಂದಿದೆ.. ಸಾಮಾನ್ಯವಾಗಿ ಈ ಹಾವುಗಳು ವಿಷಪೂರಿತ ಹಾವುಗಳಲ್ಲಿ ಒಂದಾಗಿದೆ.ಈ ಹಾವಿನ ಕವಚದಲ್ಲಿ ನಾಲ್ಕನೇ ಒಂದು ಭಾಗವು ಹೊಸದಾಗಿ ರೂಪುಗೊಳ್ಳುತ್ತದೆ.. ಆದರೆ ನಾವು ನೀವೆಲ್ಲ ಅಂದುಕೊಂಡಷ್ಟು ಈ ಹಾವು ವಿಷಪೂರಿತ ಅಲ್ಲ.. ಈ ಹಾವಿನ ವಿಷವನ್ನು ಇಲಿಗಳ ಮೇಲೆ ಪ್ರಯೋಗವನ್ನ ಮಾಡಿದ್ದಾರೆ. ಆ ಪ್ರಯೋಗದಲ್ಲಿ ತಿಳಿದಿರುವ ವಿಷಯವೇ ಈ ಹಾವು ನಾವು ನೀವೆಲ್ಲ ಅಂದುಕೊಂಡಷ್ಟು ವಿಷಕಾರಿಯಲ್ಲ ಅನ್ನೋದು.
ಇನ್‍ಲ್ಯಾಂಡ್ ತೈಪನ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಹಾವು ತುಂಬಾ ವಿಷಕಾರಿಯುಕ್ತವಾದದ್ದು ಎಂದು ಹೇಳಬಹುದು... ಈ ಹಾವನ್ನು ಆಕ್ಸಿರಾನಸ್ ಕುಲದ ಅತ್ಯಂತ ವಿಷಪೂರಿತ ಹಾವು ಎಂದೂ ಕರೆಯುತ್ತರೆ.. ಇತ್ತಿಚಿಗೆ ಈ ಹಾವಿನ ಸಂತತಿ ಕಡಿಮೆಯಾಗುತ್ತಿದೆ.. ಈ ಹಾವು ಮಧ್ಯಪೂರ್ವ ಆಸ್ಟ್ರೇಲಿಯಾದ ಪ್ರದೇಶಗಳಲ್ಲಿ ಕಂಡು ಬರುತ್ತವೆ.. ಆದಿವಾಸಿ ಆಸ್ಟ್ರೇಲಿಯನ್ನರ ದಂಡರಾಬಿಲ್ಲಾ ಎಂಬ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.. ಇವು ಮನುಷ್ಯನಿಗೆ ಕಚ್ಚಿದರೆ ಈ ಮನುಷ್ಯ ಉಳಿಯೋದೆ ಇಲ್ಲ.ಸಾವು ಕಟ್ಟಿಟ್ಟ ಬುತ್ತಿ.
ರಸ್ಸೆಲ್ನ ವೈಪರ್ ಎಂಬುದು ವೈಪರೀಡೆ ಕುಟುಂಬದ ವಿಷಯುಕ್ತ ಹಾವಿನ ಜಾತಿಯಾಗಿದೆ. ಈ ಹಾವುಗಳು ಹಳೆಯ ಸಂತತಿಗೆ ಸೇರಿರುವುಗಳಲ್ಲಿ ಒಂದಾಗಿದೆ. ಇವುಗಳು ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಆಗಾಗ ಕಾಣಿಸುತ್ತವೆ.. ಇವು ಮೋಸ್ಟ್ ಡೇಂಜರಸ್ ಹಾವುಗಳಲ್ಲಿ ಒಂದಾಗಿದೆ.. ಇವು ಬೇರೆ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಈ ಹಾವನ್ನು ಚೈನ್ ವೈಪರ್ ಎಂದು ಕರೆಯುತ್ತಾರೆ.
Comments