ಓಲಾ ಪ್ರಯಾಣಿಕರಿಗೆ ಸಿಹಿ ಸುದ್ದಿ..!!
ಓಲಾ ಪ್ರಯಾಣಿಕರಿಗೆ ಇಲ್ಲೊಂದು ಸಿಹಿ ಸುದ್ದಿ. ಅದೇನಪ್ಪ ಅಂದರೆ ಪ್ರಯಾಣಿಕರ ಹಿತಕ್ಕಾಗಿ ಓಲಾ ಕ್ಯಾಬ್ ಪ್ರಯಾಣಿಕರಿಗೆ ವಿಮೆ ಸೌಲಭ್ಯ ನೀಡಲು ಮುಂದಾಗಿದೆ. ಹೌದು, ಇನ್ಮುಂದೆ ಓಲಾದಲ್ಲಿ ಪ್ರಯಾಣಿಸುವ ವೇಳೆ ಮೃತಪಟ್ಟರೆ, ಅಪಘಾತಕ್ಕೀಡಾದರೆ, ವಿಮಾನ ಮಿಸ್ ಆದರೆ, ಅಥವಾ ವಸ್ತುಗಳು ಕಳೆದು ಹೋದರೆ ವಿಮೆಯತ ಹಣವನ್ನು ಪರಿಹಾರ ನೀಡಲು ಓಲಾ ನಿರ್ಧರಿಸಿದೆ. ಈ ಸೌಲಭ್ಯವು ಓಲಾ ರಿಕ್ಷಾ ಹಾಗೂ ಓಲಾ ಕ್ಯಾಬ್ ಪ್ರಯಾಣಿಕರಿಗೆ ಲಭ್ಯವಿದೆ.
ಅಕೊ ಜನರಲ್ ಇನ್ಶೂರೆನ್ಸ್ ಕಂಪನಿ ಜೊತೆಗೆ ಓಲಾ ಈ ಒಪ್ಪಂದ ಮಾಡಿಕೊಂಡಿದೆ. ಚಲೋ ಬೇಫಿಕರ್ ಯೋಜನೆಯಡಿ ಈ ಸೌಲಭ್ಯ ನೀಡಲಾಗುತ್ತಿದ್ದು, 5 ಲಕ್ಷದವರೆಗೆ ವಿಮೆ ಸೌಲಭ್ಯ ನೀಡಲಾಗುತ್ತಿದೆ. ಒಟ್ಟು 110 ನಗರಗಳಲ್ಲಿ ಈ ಸೌಲಭ್ಯ ನೀಡಲಾಗುತ್ತಿದೆ.
Comments