ಶೋಲೆ ಖ್ಯಾತಿಯ ರಾಜ್ ಕಿಶೋರ್ ಇನ್ನಿಲ್ಲ



ಶೋಲೆ ಚಿತ್ರದಲ್ಲಿ ಖೈದಿಯ ಪಾತ್ರದಲ್ಲಿದ್ದ ಒಬ್ಬರಾಗಿದ್ದ ನಟ ಕಿಶೋರ್ ನಿಧನ ಹೊಂದಿದ್ದಾರೆ. 85 ವರ್ಷ ವಯಸ್ಸಾಗಿದ್ದ ಅವರಿಗೆ ಕೆಲ ದಿನಗಳಿಂದ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
ರಾಜ್ ಕಿಶೋರ್ ಕಳೆದ ರಾತ್ರಿ ಹೃದಯಾಘಾತವಾಗಿ ಗುರಗಾಂವ್ ನಲ್ಲಿ ನ ಅವರ ನಿವಾಸದಲ್ಲಿ ಮೃತಪಟ್ಟರು ಎಂಬುದಾಗಿ ಸಿನಿಮಾ ಮತ್ತು ಟಿವಿ ಕಲಾವಿದರ ಸಂಘದ ಸದಸ್ಯ ನೂಪುರ್ ಅಲಂಕರ್ ತಿಳಿಸಿದ್ದಾರೆ.ರಾಜ್ ಕಿಶೋರ್ ಪತ್ನಿ ಹಾಗೂ ಒಬ್ಬ ಮಗನನನ್ನು ಅಗಲಿದ್ದು, ಸ್ಮಶಾನದಲ್ಲಿ ಇಂದು ಬೆಳಿಗ್ಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶೋಲೆ ಮಾತ್ರವಲ್ಲದೆ, ಪಡೊಸನ್ ( 1968) ದೀವಾರ್ (1975) ರಾಮ್ ಔರ್ ಶ್ಯಾಮ್ ( 1967)ಹರೇ ರಾಮ ಹರೇ ಕೃಷ್ಣ ( 1971) ಅಸಮಾನ್ (1984) ಬಾಂಬೆ ಟು ಗೋವಾ ( 1972) ಕರಣ್ ಅರ್ಜುನ್ (1995) ಸೇರಿದಂತೆ ಹಲವು ಚಿತ್ರಗಳಲ್ಲಿ ರಾಜ್ ಕಿಶೋರ್ ಅಮೋಘ್ನವಾಗಿ ಅಭಿನಯಿಸಿದ್ದರು. ನಟ ರಾಜ್ ಕಿಶೋರ್ ನಿಧನಕ್ಕೆ ಹಲವಾರು ಗಣ್ಯಾತಿಗಣ್ಯರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
Comments