2 ರೂ. ಗೆ ಸಿಗುತ್ತೆ ಇಂಟರ್ನೆಟ್...! ಈ ಸೌಲಭ್ಯ ಪಡೆಯೋದು ಹೇಗೆ..?

ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇಂಟರ್ನೆಟ್ ವೆಚ್ಚಗಳನ್ನು ಶೇ. 90 ರಷ್ಟು ಕಡಿತಗೊಳಿಸಲು ಸಾರ್ವಜನಿಕ ವೈಫೈ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಮಂಡಿಸಿದೆ.
ಹಿಂದೆ ಇದ್ದ ಸಾರ್ವಜನಿಕ ದೂರವಾಣಿ ಬೂತ್ ಗಳ(PCO) ಮಾದರಿಯಲ್ಲಿ ಸಣ್ಣ, ಸಣ್ಣ ವೈಫೈ ಸೇವಾ ಪೂರೈಕೆದಾರರನ್ನು ಉತ್ತೇಜಿಸಲಾಗುವುದು. ಗ್ರಾಮೀಣ ಪ್ರದೇಶಗಳಿಗೂ ಜಾಗತಿಕ ಮಟ್ಟದ ವೇಗದ ಇಂಟರ್ನೆಟ್ ಒದಗಿಸಲು ಈ ಯೋಜನೆ ರೂಪಿಸಲಾಗಿದೆ. ದೂರ ಸಂಪರ್ಕ ಖಾತೆ ಸಚಿವ ಮನೋಜ್ ಸಿನ್ಹಾ ಅವರಿಗೆ ಈ ಪ್ರಸ್ತಾವನೆಯನ್ನು ಸಲ್ಲಿಸಿರುವ ಟ್ರಾಯ್ ಮುಖ್ಯಸ್ಥ ಆರ್.ಎಸ್. ಶರ್ಮಾ, ದೇಶಾದ್ಯಂತ ಬ್ರಾಡ್ ಬ್ಯಾಂಡ್ ಪ್ರಸರಣ ಮುಖ್ಯವಾಗಿದ್ದು, ವೈಫೈ ಅಗ್ಗದ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ದೆಹಲಿ ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ವೈಫೈ ಬೂತ್ ಗಳ ಸೇವೆ ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ಕೇವಲ 2 ರೂ.ಗೆ ವೇಗದ ವೈಫೈ ಸೇವೆ ನೀಡುವುದು ಟ್ರಾಯ್ ಉದ್ದೇಶವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Comments