ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತೆ ಎಂಬ ಚಿಂತೆ ಮಾಡ್ತಿದೀರಾ..? ಹಾಗಿದ್ರೆ ಈ ಸೌಲಭ್ಯ ಪಡೆದು ಕೊಳ್ಳಿ..!!



ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತೆ ಎಂಬ ಚಿಂತೆ ಎಲ್ಲರನ್ನೂ ಕಾಡ್ತಿದೆ. ತಂಪು ಗಾಳಿ ನೀಡುವ ಜೊತೆಗೆ ಕಡಿಮೆ ಕರೆಂಟ್ ಬಳಸಿಕೊಳ್ಳುವ ಫ್ಯಾನ್ ಗಳ ಹುಡುಕಾಟ ಜೋರಾಗಿ ನಡೆಯುತ್ತಿದೆ.ಕಡಿಮೆ ಕರೆಂಟ್ ನಲ್ಲಿ ಚೆನ್ನಾಗಿ ಗಾಳಿ ನೀಡುವ ಫ್ಯಾನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇಎಂಐನಲ್ಲೂ ಈ ಫ್ಯಾನ್ ಗಳು ನಿಮಗೆ ಸಿಗ್ತಿವೆ. ಮಾರುಕಟ್ಟೆಯಲ್ಲಿ ಈ ಫ್ಯಾನ್ ಸಿಗಲಿಲ್ಲವೆಂದ್ರೆ ಚಿಂತೆ ಬೇಡ. ಸರ್ಕಾರಿ ಯೋಜನೆಯಡಿ ನೀವು ಈ ಫ್ಯಾನ್ ಖರೀದಿ ಮಾಡಬಹುದು. ಸರ್ಕಾರ ಎನರ್ಜಿ ಎಫಿಷಿಯೆನ್ಸಿ ಸ್ಕೀಮ್ ಅಡಿಯಲ್ಲಿ ಅರ್ಧದಷ್ಟು ಬೆಲೆಗೆ ನಿಮಗೆ ಫ್ಯಾನ್ ನೀಡ್ತಿದೆ. ಇಎಂಐ ಸೌಲಭ್ಯವನ್ನೂ ನೀಡಿದೆ. ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿಯ ಈ ಗೋಡೆ ಫ್ಯಾನ್ ಗೆ 45-50 ವ್ಯಾಟ್ ಶಕ್ತಿ ಸಾಕು. ಸಾಮಾನ್ಯವಾಗಿ ಸೀಲಿಂಗ್ ಫ್ಯಾನ್ ಗೆ 75-80 ವ್ಯಾಟ್ ಶಕ್ತಿ ಬೇಕಾಗುತ್ತದೆ. ಈ ಫ್ಯಾನ್ ಸಾಮಾನ್ಯ ಫ್ಯಾನ್ ಗಿಂತ ಕಡಿಮೆ ಗಾಳಿ ನೀಡುತ್ತದೆ.
ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಸೀಲಿಂಗ್ ಫ್ಯಾನ್ ಬೆಲೆ ಸಾವಿರಕ್ಕಿಂತ ಹೆಚ್ಚಿದೆ. ಆದ್ರೆ ಸರ್ಕಾರದಿಂದ ಸಿಗ್ತಿರುವ ಈ ಫ್ಯಾನ್ ಬೆಲೆ ತುಂಬಾ ಕಡಿಮೆಯಿದೆ. ಸರ್ಕಾರ ಎನರ್ಜಿ ಎಫಿಷಿಯೆನ್ಸಿ ಸರ್ವಿಸ್ ಲಿಮಿಟೆಡ್ ಗೆ ಫ್ಯಾನ್ ಮಾರಾಟದ ಹೊಣೆ ನೀಡಿದೆ. ದೆಹಲಿ ನಿವಾಸಿಗಳು ವಿದ್ಯುತ್ ಕಂಪನಿಯಿಂದ ಇದನ್ನು ಖರೀದಿ ಮಾಡಬಹುದಾಗಿದೆ. BPCL, HPCL, IOCL ಹಾಗೂ ಅಂಚೆ ಕಚೇರಿ ಕೂಡ ಈ ಫ್ಯಾನ್ ಮಾರಾಟ ಮಾಡ್ತಿದೆ.
Comments