ಸದ್ದಿಲ್ಲದೆ ಸದ್ದು ಮಾಡುವ ಮಧುಮೇಹದ ಬಗ್ಗೆ ಎಚ್ಚರವಿರಲಿ..!
ಎಲ್ಲರಿಗೂ ತಮ್ಮ ಆರೋಗ್ಯದ ಬಗ್ಗೆ ಎಲ್ಲಿಲ್ಲದ ಚಿಂತೆ..ಎಲ್ಲಿ ಜಾಸ್ತಿ ತಿಂದರೆ ಆರೋಗ್ಯ ಹಾಳಗುತ್ತೋ ಅಥವಾ ಡಯಟ್ ಮಾಡುದ್ರೆ ಎಲ್ಲಿ ಫುಲ್ ಸಣ್ಣ ಆಗಿ ಕಡ್ಡಿ ತರ ಕಾಣಿಸ್ತಿನೋ ಅಂತ ಯೋಚನೆ ಆಗುತ್ತೆ ಅಂತಹ ಯೋಚನೆಗಳಲ್ಲಿ ಈ ಮಧುಮೇಹವು ಕೂಡ ಒಂದು ಏಕಂದ್ರೆ ಆರೋಗ್ಯವೇ ಭಾಗ್ಯ ಎನ್ನುವುದು ಎಲ್ಲರಿಗೂ ಗೊತ್ತೆ ಇರುತ್ತೆ…ಸೋ... ಅದನ್ನ ಕಾಪಾಡಿಕೊಳ್ಳುವುದು ಕೂಡ ತುಂಬ ಮುಖ್ಯವಾಗಿರುತ್ತದೆ
ಇತ್ತಿಚಿಗೆ ಅನೇಕ ಕಾಯಿಲೆಗಳು ನಮ್ಮನ್ನ ಭಾದಿಸುತ್ತವೆ.ಅದರಲ್ಲಿ ಮಧುಮೇಹವು ಕೂಡ.. ಅದರ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ. ಮಧುಮೇಹದಲ್ಲಿ ನೀರಿನ ಪಾತ್ರ..ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇನ್ನೂ ಅರ್ಧವಾಗುವ ರೀತಿ ಹೇಳುವುದಾದರೆ ಶುಗರ್.ಎಸ್ ಶುಗರ್ ಅನ್ನೋದು ಒಂದು ಸಲ ಬಂದು ಬಿಟ್ಟರೆ ಸಾಕು.ಅದನ್ನ ತಿನ್ನಬೇಡ, ಇದನ್ನ ತಿನ್ನಬೇಡ, ಸ್ವೀಟ್ ಅಂತೂ ಮುಟ್ಟಕ್ಕೆ ಹೋಗ್ಬೇಡ.ಅಂತ ಎಲ್ಲರೂ ತಲೆ ತಿನ್ನೂಕೆ ಶುರು ಮಾಡ್ತಾರೆ.ಆಗ ಸುಮ್ನೆ ನಿಮಗೂ ಬೇಜಾರುತ್ತೆ… ಬಾಯಿನ ಸಿಹಿ ಮಾಡಿಕೊಳ್ಳೋಣ ಅಂದ್ರೆ ಆಗ್ತಿಲ್ವಲ್ಲ ಅಂತ..ಡೋಂಟ್ ವರಿ ಅದಕೊಂದಿಷ್ಟು ಟಿಪ್ಸ್ ಕೊಡ್ತಿವಿ…ನಾವ್ ಕೊಡ್ತೀವಿ.. ಆದರೆ ಇದನ್ನ ಟಿಪ್ಸ್ ಅನ್ನೋದಕ್ಕಿಂತ ನೀವು ಕೂಡ ಇದನ್ನ ಅಳವಡಿಸಿಕೊಳ್ಳಿ..
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ಸತತವಾಗಿ ಬಾಯಾರಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೆ ಇದನ್ನ ಹಗುರವಾಗಿ ಪರಿಗಣಿಸುವಂತಿಲ್ಲ.. ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ ಸೂಕ್ತ ಪರೀಕ್ಷೆಗಳನ್ನು ಮಾಡಿಸುವುದು ಅವಶ್ಯಕ ಏಕೆಂದರೆ ಇದು ಮಧುಮೇಹದ ಒಂದು ಲಕ್ಷಣವೂ ಕೂಡ ಆಗಿರಬಹುದು.ಸದ್ದಿಲ್ಲದೆ ಸದ್ದು ಮಾಡುವ ಮಧುಮೇಹದ ಬಗ್ಗೆ ಸ್ವಲ್ವ ಎಚ್ಚರವಿರಲಿ.. ಯಾಕಂದ್ರೆ ನಿಮಗೆ ಮಧುಮೇಹ ಇರುವುದು ಒಂದು ವೇಳೆ ಖಾತ್ರಿಯಾದರೆ ಎಲ್ಲಕ್ಕಿಂತ ಮೊದಲು ಮಾಡಬೇಕಾದ ಕೆಲಸವೆಂದರೆ ನೀವು ಕುಡಿಯುತ್ತಿರುವ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ.. ಏಕೆಂದರೆ ಮಧುಮೇಹಿಗಳ ರಕ್ತದಲ್ಲಿ ಬಳಕೆಯಾಗದ ಸಕ್ಕರೆ ಅಂಶವು ಇರುತ್ತದೆ.. ಈ ಸಕ್ಕರೆ ನಮ್ಮ ಜೀವಕೋಶಗಳಿಂದ ನೀರನ್ನು ಹೀರಿಕೊಳ್ಳುವ ಸಾವiಥ್ರ್ಯವನ್ನು ಹೊಂದಿರುತ್ತದೆ. ಪರಿಣಾಮವಾಗಿ ದೇಹಕ್ಕೆ ಅಗತ್ಯವಾದ ನೀರಿನ ಪ್ರಮಾಣ ಕಡಿಮೆಯಾಗಿ ಆರೋಗ್ಯ ಹಾಳಾಗುವ ಪರಿಸ್ಥಿತಿ ಹೆಚ್ಚಿರುತ್ತದೆ.
ನಿಸರ್ಗ ನಮಗೆ ನೀಡಿರುವ ಅತ್ಯದ್ಬುತ ದ್ರವ ಎಂದರೆ ನೀರು.. ಯಾಕಂದ್ರೆ ಇದರಲ್ಲಿ ಕ್ಯಾಲೋರಿಗಳಿಲ್ಲ. ಕೊಲೆಸ್ಟ್ರಾಲ್, ಕೆಫಿನ್ ಸೋಡಿಯಂ, ಕೊಬ್ಬು ಮೊದಲಾದವುವು ಯಾವುವು ಇರುವುದಿಲ್ಲ.. ಆದ್ದರಿಂದಲೆ ನೀರು ನಮ್ಮ ದೇಹಕ್ಕೆ ಅಷ್ಟು ಮುಖ್ಯ ಆಗುವುದು ಅನ್ಸುತ್ತೆ.. ವಿಶೇಷವಾಗಿ ಮಧುಮೇಹಿಗಳು ಇತರರಿಗಿಂತಲೂ ಹೆಚ್ಚು ನೀರು ಕುಡಿಯುವುದು ಅವಶ್ಯಕ ಅಷ್ಟೆ ಅಲ್ಲದೆ ಅನಿವಾರ್ಯವು ಕೂಡ ಹೌದು.. ಮಧುಮೇಹಿಗಳು ನಿರ್ಜಲಿಕರಣದಿಂದ ರಕ್ಷಿಸಿಕೊಳ್ಳಬೇಕಾದರೆ ಹೆಚ್ಚು ನೀರನ್ನು ಕುಡಿಯಬೇಕು.ದೇಹದ ಅಂಗಗಳಲ್ಲಿ ನೀರು ಇಲ್ಲದಿದ್ದರೆ ಮಾಂಸಖಂಡಗಳಲ್ಲಿ ಶಕ್ತಿ ಹೆಚ್ಚುತ್ತದೆ. ಇದರಿಂದ ದೇಹದಲ್ಲಿ ಆಯಾಸವು ಕೂಡ ಹೆಚ್ಚುತ್ತದೆ..ಇದೆ ಕಾರಣಕ್ಕೆ ಮಧುಮೇಹಿಗಳಿಗೆ ಉಪವಾಸ ಹಿಡಿಯದಂತೆ ವೈದ್ಯರು ಸೂಚಿಸುತ್ತಾರೆ.. ಅಷ್ಟೆ ಅಲ್ಲದೆ ಮಧುಮೇಹಿಗಳು ಅಂದ ತಕ್ಷಣ ವ್ಯಾಯಾಮಾದ ಅವಶ್ಯಕತೆ ಇಲ್ಲ ಅಂತ ಏನು ಇಲ್ಲ…ಮಧುಮೇಹಿಗಳಿಗೆ ಖಂಡಿತಾ ವ್ಯಾಯಾಮಾ ಅಗತ್ಯ.. ಹೆಚ್ಚಾಗಿ ನಡೆಯುವುದು ಇವರಿಗೆ ಹೇಳಿಮಾಡಿಸಿದಂತಹ ವ್ಯಾಯಾಮ. ಇನ್ನೂ ಮುಂದೆ ನಿಮ್ಮ ಆರೋಗ್ಯದ ಬಗ್ಗೆ ಒಂದಿಷ್ಟು ಕಾಳಜಿ ಮಾಡಿ ಅದು ಮನೆಯಲ್ಲಿ ಇದ್ದುಕೊಂಡೆ.
Comments