ಮೊಬೈಲ್ ಬಗ್ಗೆ ಒಂದಿಷ್ಟು ಮಾಹಿತಿಗಳು. ಫನ್ನಿ ಅನಿಸಿದರೂ ನಂಬಲೆಬೇಕು.!
ಮೊಬೈಲ್… ಇತ್ತಿಚಿನ ಮೋಸ್ಟ್ ಇಂಪಾರ್ಟೆಂಟ್ ಥಿಂಗ್ ಅಂತಾನೆ ಹೇಳಬಹುದು.ಯಾಕಂದ್ರೆ ಎಲ್ಲರ ಕೈಯಲ್ಲೂ ಕೂಡ ಮೊಬೈಲ್ ಓಡಾಡುತ್ತಲೆ ಇರುತ್ತದೆ.. ಮೊಬೈಲ್ ಇಲ್ಲದ ಮನುಷ್ಯರನ್ನು ಹುಡುಕುವುದು ತುಂಬಾನೆ ಕಷ್ಟ.. ಅದು ಇತ್ತಿಚಿನ ಜನರೇಷನ್‍ನಲ್ಲಿ ನೋ ವೇ....
ಆದರೆ ಮೊಬೈಲ್ ಬಗ್ಗೆ ನಿಮಗೆಷ್ಟು ಗೊತ್ತು... ಮೊಬೈಲ್ ಹೆಚ್ಚಾಗಿ ಬಳಸಬಾರದು.. ಇದರಿಂದ ಹಾರ್ಟ್ ಪ್ರಾಬ್ಲಂ ಬರುತ್ತೆ.. ಒಂದಿಷ್ಟು ಆರೋಗ್ಯ ಸಮಸ್ಯೆಗಳು ಬರುತ್ತವೆ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯವೆ... ಇದನ್ನ ಹೊರತು ಪಡಿಸಿ ಕೆಲವೊಂದು ಇನ್ಟ್ರೆಸ್ಟಿಂಗ್ ವಿಷಯಗಳನ್ನ ಹೇಳ್ತೀವಿ ಕೇಳ್ತೀವಿ..ನಾವು ಬಳಸುವ ಮೊಬೈಲ್ ಹೆಚ್ಚು ಕಂಪ್ಯೂಟಿಂಗ್ ಪವರ್ ಅನ್ನು ಹೊಂದಿದೆ.. ಅದು ಎಷ್ಟು ಅಂದರೆ ಅಪೋಲೋ 11 ಚಂದ್ರನ ಲ್ಯಾಡಿಂಗ್‍ಗೆ ಬಳಸುವ ಕಂಪ್ಯೂಟರ್‍ಗಳಿಗಿಂತ ಹೆಚ್ಚಾಗಿದೆ.
ಒಂದು ದಿನಕ್ಕೆ ಎಷ್ಟು ಮೊಬೈಲ್‍ಗಳು ಮಾರಾಟ ಆಗುತ್ತೆ ಅನ್ನೋದು ಗೊತ್ತಾ... ದಿನಕ್ಕೆ ಸರಿ ಸುಮಾರು 3,40,000 ರಷ್ಟು ಮೊಬೈಲ್ ಮಾರಾಟ ಆಗುತ್ತದೆ.. ಎಷ್ಟು ಆಶ್ಚರ್ಯ ಅಲ್ವ....ಇತ್ತಿಚಿನ ಒಂದು ಸರ್ವೆಯ ಪ್ರಕಾರ ಜಪಾನಿನಲ್ಲಿ ಸುಮಾರು ಶೇಕಡ 90ರಷ್ಟು ಪೋನ್‍ಗಳು ವಾಟರ್ ಪ್ರೂಪ್ ಆಗಿದೆ.. ಏಕೆಂದರೆ ಅಲ್ಲಿನ ಯುವಕರು ಶವರ್‍ನಲ್ಲೂ ಕೂಡ ಮೊಬೈಲ್ ಅನ್ನು ಬಳಸುತ್ತಾರಂತೆ.. ಪ್ರತಿವರ್ಷ ಬ್ರಿಟನ್ನಿನಲ್ಲಿ ಶೌಚಾಲಯವನ್ನು ಕ್ಲೀನ್ ಮಾಡುವಾಗ 1,00000 ಪೋನ್‍ಗಳು ಸಿಗುತ್ತವೆ.. ಎಂತ ಕಾಮಿಡಿ ಅಲ್ವ.. ಮೊಬೈಲ್ ಅನ್ನು ಕೂಡ ಬಾಥ್ ರೂಮ್‍ಗೆ ತೆಗೆದುಕೊಂಡು ಹೋಗುವುದು. ಇದಕ್ಕೆ ಹೇಳೋದು ಅನಿಸುತ್ತದೆ ಮಂಗನ ಕೈ ಮಾಣಿಕ್ಯ ಕೋಡೋದು ಅಂತ.
Comments