ಭಾರತದ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು ಗೊತ್ತಾ?
ಭಾರತದ ರಾಷ್ಟ್ರ ಧ್ವಜ ಸಾಮಾನ್ಯವಾಗಿ ನಿಮಗೆಲ್ಲ ಗೊತ್ತೆ ಇರುತ್ತೆ... ಆದರೆ ಅದು ಯಾವಾಗ ಪ್ರಾರಂಭವಾಯಿತು ಅದರ ಹಿನ್ನಲೆ ಏನು ಅನ್ನುವುದು ಗೊತ್ತಾ...? ನಮ್ಮ ರಾಷ್ಟ್ರ ಧ್ವಜ ಎಲ್ಲಿ ತಯಾರಾಗುತ್ತದೆ ಅನ್ನುವುದು ಗೊತ್ತಾ..?
ನಮ್ಮ ರಾಷ್ಟ್ರಧ್ವಜದಲ್ಲಿ 3 ಬಣ್ಣಗಳಿವೆ. ಕೇಸರಿ ಬಿಳಿ ಹಸಿರು ಇದೆಲ್ಲಾ ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೂ ಕೂಡ ಗೊತ್ತು.. ಆದರೆ ಈ ರಾಷ್ಟ್ರ ಧ್ವಜವನ್ನು ಯಾವಾಗ ಅಂಗಿಕರಿಸಲಾಯಿತು ಅನ್ನೋದು ಗೊತ್ತಾ.
- ಭಾರತ ಸ್ವತಂತ್ರಗೊಂಡಿದ್ದು 1947 ಆಗಸ್ಟ್ 15 ರಂದು... ಆದರೆ ಸ್ವತಂತ್ರ ಬರುವುದಕ್ಕೂ ಮೊದಲೆ ಅಂದರೆ 1947 ಜುಲೈ 22 ರಂದು ನಡೆದ ಸಂವಿಧಾನ ಸಭೆಯಲ್ಲಿ ಅಂಗೀಕರಿಸಲಾಯಿತು.
- ಕೃಷಿಕ ಮತ್ತು ಸ್ವಾತಂತ್ರ ಹೋರಾಟಗಾರರಾದ ಪಿಂಗಲಿ ವೆಂಕಯ್ಯರವರು ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದರು
- 1921 ರಲ್ಲಿ ಆಂದ್ರ ಪ್ರದೇಶದ ಹುಡುಗ ಒಂದು ದ್ವಜವನ್ನು ಮಾಡಿದರು.. ಮತ್ತು ಆ ಧ್ವಜವನ್ನು ಗಾಂಧೀಜಿಯವರು ತೆಗೆದುಕೊಂಡರು.
- ಆ ಧ್ವಜದಲ್ಲಿ ಎರಡು ಬಣ್ಣಗಳು ನಿರ್ಮಿತವಾಗಿದ್ದವು.. ಎರಡು ಪ್ರಮುಖ ಸಮುದಾಯಗಳು ಅಂದರೆ ಹಿಂದೂ ಮುಸ್ಲಿಂರನ್ನು ಪ್ರತಿನಿಧಿಸುವ ಕೆಂಪು,ಹಸಿರು ಬಣ್ಣ.. ಇದರ ಜೊತೆಗೆ ಪ್ರಗತಿಯನ್ನು ಸೂಚಿಸಲು ಬಿಳಿ ಬಾರ್ ಮತ್ತು ನೂಲುವ ಚಕ್ರವನ್ನು ಸೇರಿಸಲಾಯಿತು.
- 1931 ಇತಿಹಾಸದಲ್ಲಿ ಒಂದು ಹೆಗ್ಗುರುತು ಅಂತ ಹೇಳಬಹುದು. ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರೀಯ ಧ್ವಜ ಎಂದು ಅಳವಡಿಸಿಕೊಳ್ಳಲಾಯಿತು.
- 1947 ಜುಲೈ 22 ರಂದು 1947 ರಂದು ಅಂಗೀಕೃತವಾಗಿ ನಮ್ಮ ರಾಷ್ಟ್ರ ಧ್ವಜವನ್ನು ಅಂಗೀಕರಿಸಲಾಯಿತು.
Comments