ಯಾವ ಕಲರ್ ಕಾರ್ ಸೇಪ್ ಅನ್ನೋದು ಗೊತ್ತಾ?
ಕಾರಿನಲ್ಲಿ ಪ್ರಯಾಣ ಮಾಡೋದು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ.. ಅದರಲ್ಲೂ ಲಾಂಗ್ ಟ್ರಿಪ್ ಹೋಗೋದು ಅಂದರೆ ಕೆಲವರಿಗಂತೂ ಇನ್ನೂ ಇಷ್ಟ.. ಇನ್ನೂ ಕಾರ್ ತೆಗೆದು ಕೊಳ್ಳುವಾಗ ಅಂತೂ ನಾನಾ ಕಡೆ ಶಾಸ್ತ್ರ ಕೇಳೊದು.. ಎಲ್ಲರನ್ನು ಯಾವ ಕಲರ್ ಚೆನ್ನಾಗಿ ಕಾಣುತ್ತೆ ಅಂತ ವಿಚಾರಿಸೋದು ಇದೆಲ್ಲಾ ಮಾಡ್ತಾನೆ ಇರ್ತೀವಿ..
ಪ್ರತಿಯೊಬ್ಬರು ಅವರಿಗೆ ಇಷ್ಟುವಾದ ಬಣ್ಣದ ಕಾರ್ ತಗೋತಾರೆ.. ಅದ್ರಲ್ಲಿ ಬಿಳಿ ಬಣ್ಣದ ಕಾರು ತುಂಬ ಸುರಕ್ಷಿತ ಎಂದು ಅಧ್ಯಾನವೊಂದು ತಿಳಿಸಿದೆ.. ಎಸ್ ಬಿಳಿ ಬಣ್ಣದ ಕಾರು ಹೆಚ್ಚು ಸುರಕ್ಷಿತವಾಗಿರುತ್ತದೆ. ಬಿಳಿ ಬಣ್ಣದ ಕಾರಿನಲ್ಲಿ ಆಕ್ಸಿಡೆಂಟ್ ಅತೀ ಕಡಿಮೆ ಇದಕ್ಕೆ ಕಾರಣವನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಬಿಳಿ ಬಣ್ಣದ ಕಾರು ರಾತ್ರಿ ವೇಳೆ, ಅಥವಾ ಕಡಿಮೆ ಬೆಳಕಿನಲ್ಲಿ ಕಪ್ಪು ರಸ್ತೆಯ ಮೇಲೆ ಬಿಳಿ ಬಣ್ಣದ ಕಾರು ವ್ಯತ್ತಿರಿಕ್ತವಾಗಿ ಕಾಣುತ್ತದೆ. ಎದುರಿಗೆ ಬರುವ ವಾಹನಗಳಿಗೆ ಬಿಳಿಬಣ್ಣದ ಕಾರು ಎದ್ದು ಕಾಣುತ್ತದೆ ಇದರಿಂದ ಬಿಳಿ ಬಣ್ಣದ ಕಾರು ಹೆಚ್ಚು ಸುರಕ್ಷಿತವಾಗಿರುತ್ತದೆ. ಆದ್ದರಿಂದ ಇನ್ನೂ ಮುಂದೆ ಕಾರನ್ನ ತೆಗೆದುಕೊಳ್ಳೊಕು ಮೊದಲು ಬಣ್ಣಕ್ಕಿಂತ ಸೇಪ್ಟಿ ನೋಡಿ ತೆಗೆದುಕೊಳ್ಳಿ.
Comments