ನಿಮ್ಮನ್ನ ಲೋ ಬಿಪಿ ಕಾಡ್ತಿದಿಯಾ.? ಹಾಗಾದ್ರೆ ಈ ಮನೆಮದ್ದನ್ನ ಉಪಯೋಗಿಸಿ.
ಆರೋಗ್ಯವೇ ಭಾಗ್ಯ ಅನ್ನೋ ಮಾತಿನ ಪ್ರಕಾರ ಆರೋಗ್ಯ ಅನ್ನೋದು ತುಂಬಾನೇ ಮುಖ್ಯ. ಒಮ್ಮೆ ಆರೋಗ್ಯ ಕೈ ಕೊಟ್ಟರೆ ಕೋಟಿ ಕೋಟಿ ಹಣ ಸುರಿದ್ರೂ ನೋ ಯೂಸ್.ಆರೋಗ್ಯದ ಮುಂದೆ ಕೋಟಿಗಟ್ಟಲೇ ಹಣ ಇದ್ದರೂ ಕೂಡ ಕೆಲವೊಮ್ಮೆ ವೇಸ್ಟ್ ಅನ್ನಿಸುತ್ತದೆ.
ಹೌದು.. ಇಂದಿನ ಫಾಸ್ಟ್ ಯುಗದಲ್ಲಿ ಎಲ್ಲವೂ ಕೂಡ ಫಾಸ್ಟ್ ಆಗೆ ನಡೆಯುತ್ತಿವೆ. ಎಲ್ಲವೂ ಮೇಲ್ನೋಟಕ್ಕೆ ಚೆನ್ನಾಗಿ ಕಂಡರೂ ಕೂಡ ಫಾಸ್ಟ್ ಲೈಫ್ ನಿಂದ ಆರೋಗ್ಯ ಹಾಳಾಗೋದು ಖಂಡಿತ. ಆದರೆ ಇತ್ತಿಚಿಗೆ ಕಾಡುತ್ತಿರುವ ಸಮಸ್ಯೆ ಎಂದರೆ ಅದು ರಕ್ತದೊತ್ತಡ. ಈ ಸಮಸ್ಯೆಯನ್ನು ಸಾಕಷ್ಟು ಜನ ಕೇರ್ ಲೆಸ್ ಮಾಡುತ್ತಿರುತ್ತಾರೆ. ಆದರೆ ಆಗೇ ಮಾಡುವುದರಿಂದ ದೊಡ್ಡ ಸಮಸ್ಯೆ ಎದುರಾಗುವುದು ಖಂಡಿತ. ಸಮಸ್ಯೆ ದೊಡ್ಡದಾದ ಮೇಲೆ ಬಗೆಹರಿಸಿಕೊಳ್ಳಲು ಸ್ವಲ್ಪ ಕಷ್ಟವೆ ಸರಿ. ಆದ್ದರಿಂದ ಇಂತಹ ಸಮಸ್ಯೆಗಳಿಗೆ ನಾವು ಹೇಳುವ ಮನೆಮದ್ದನ್ನು ಉಪಯೋಗಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ನಾವು ಮೊದಲು ಹೇಳಿದ ಹಾಗೆ ಹೆಚ್ಚು ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ರಕ್ತದೊತ್ತಡ. ಅದನ್ನ ಸಾಮಾನ್ಯವಾಗಿ ಬಿಪಿ ಎನ್ನುತ್ತಾರೆ. ಅದರಲ್ಲೂ ಲೋ ಬಿಪಿ ಬಂದ್ರೆ ಮುಗಿತು ಕಥೆ. ಈ ಲೋ ಬಿಪಿಯನ್ನು ತುಂಬಾ ಕೇರ್ ಲೆಸ್ ಮಾಡ್ತಾರೆ. ಇದರಿಂದ ಮುಂದೆ ತುಂಬಾ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಲೋ ಬಿಪಿ ಗೆ ಕಾರಣ ಮತ್ತು ಪರಿಹಾರಗಳನ್ನು ತಿಳಿದುಕೊಳ್ಳಿ.
ಗರ್ಭಾವಸ್ಥೆಯಲ್ಲಿ : ಗರ್ಭಾವಸ್ಥೆಯಲ್ಲಿ ಲೋ ಬಿಪಿ ಸಮಸ್ಯೆ ಕಾಡುವ ಸಂಭವ ಹೆಚ್ಚಿನದ್ದಾಗಿರುತ್ತದೆ. ಆದ್ದರಿಂದ ಈ ವೇಳೆ ನಿಮ್ಮ ಬಿಪಿಯನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಗರ್ಭಿಣಿಯರು ಈ ಸಮಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು.
ಹೃದಯ ಸಮಸ್ಯೆ : ಹೃದಯ ಸಮಸ್ಯೆಗಳಿಂದ ಬಳಲುತ್ತಿದ್ದಾಗಲೂ ಕೂಡ ಲೋ ಬಿಪಿ ಸಮಸ್ಯೆಯು ಹೆಚ್ಚು ಕಾಡುತ್ತದೆ. ಆಗಲೂ ಕೂಡ ಹೆಚ್ಚು ಮುನ್ನೆಚ್ಚರಿಕೆಯನ್ನು ವಹಿಸುವುದು ಅಗತ್ಯವಾಗಿರುತ್ತದೆ.ವೈದ್ಯರು ಹೇಳುವ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ.
ನಿರ್ಜಲೀಕರಣ : ಲೋ ಬಿಪಿಗೆ ಡೀಹೈಡ್ರೇಶನ್ ಒಂದು ಪ್ರಮುಖ ಕಾರಣವಾಗಿದೆ. ಅತ್ಯಂತ ಕಡಿಮೆ ನೀರು ಕುಡಿಯುವುದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ಲೋ ಬಿಪಿ ಸಮಸ್ಯೆಯನ್ನು ತಂದೊಡ್ಡುತ್ತದೆ. ಆದ್ದರಿಂದ ಅತ್ಯಧಿಕ ಪ್ರಮಾಣದಲ್ಲಿ ನೀರು ಸೇವನೆ ಮಾಡುವುದರಿಂದ ನಿರ್ಜಲೀಕರಣವನ್ನು ತಡೆಯಬಹುದಾಗಿದೆ.
ಇದಕ್ಕೆಲ್ಲಾ ಒಂದಿಷ್ಟು ಮನೆ ಮದ್ದುಗಳನ್ನ ಬಳಸಿದರೆ ಲೋ ಬಿಪಿ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ.
- ವ್ಯಾಯಾಮ : ನಿತ್ಯವೂ ಕೂಡ ಕೆಲವು ಸರಳ ವ್ಯಾಯಾಮವನ್ನು ಮಾಡುವುದರಿಂದಲೂ ಕೂಡ ಕಡಿಮೆ ರಕ್ತದ ಒತ್ತಡ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ. ವ್ಯಾಯಾಮ ಮಾಡುವುದರಿಂದ ಮನಸಿಗೆ ನೆಮ್ಮದಿ ಕೂಡ ಸಿಗುತ್ತದೆ.
- ಬಾದಾಮಿಯನ್ನು ಪೇಸ್ಟ್ ಮಾಡಿ ಬೆಚ್ಚಗಿನ ನೀರಿನಲ್ಲಿ ಕುಡಿಯುವುದು ಕೂಡ ಸಹಕಾರಿಯಾಗುತ್ತದೆ. ಬಾದಾಮಿ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.
- ಬೀಟ್ ರೋಟ್ ಜ್ಯೂಸ್ ಅನ್ನು ಕುಡಿಯಿರಿ. ಇದು ದೇಹದಲ್ಲಿನ ರಕ್ತವನ್ನು ಹೆಚ್ಚಿಸುತ್ತದೆ.
ಇವೆಲ್ಲಾವನ್ನು ಒಮ್ಮೆ ಉಪಯೋಗಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ
Comments