ಜೀನ್ಸ್ ಹಾಗೂ ಟೀ ಶರ್ಟ್ ಧರಿಸೋ ಮಹಿಳೆಯರಿಂದ ಹಿಜಡಾಗಳ ಜನನ : ಶಿಕ್ಷಕನ ವಿವಾದ

ಕೇರಳದ ಶ್ರೀ ಶಂಕರ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಶಿಕ್ಷಕರಾಗಿರುವ ಡಾ.ರಜಿತ್ ಕುಮಾರ್, ಹಿಜಡಾ ಮತ್ತು ದುರ್ಬಲ ಮಕ್ಕಳು ಯಾಕೆ ಹುಟ್ಟುತ್ತಾರೆ ಎಂಬ ಬಗ್ಗೆ ತರಗತಿಯೊಂದರಲ್ಲಿ ವೈಜ್ಞಾನಿಕವಾಗಿ ವಿವರಿಸಿದ್ದಾರೆ.
ಕೇರಳದ ಶಿಕ್ಷಕರೊಬ್ಬರು ಜೀನ್ಸ್ ಹಾಗೂ ಟೀ ಶರ್ಟ್ ಧರಿಸುವ ಮಹಿಳೆ ಹಿಜಡಾಗಳಿಗೆ ಜನ್ಮ ನೀಡುತ್ತಾಳೆ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ, ಮಹಿಳೆಯರು ಜೀನ್ಸ್ ಧರಿಸುವುದರಿಂದ ಅವರಲ್ಲಿ ಸ್ತ್ರೀತನ ದುರ್ಬಲಗೊಳ್ಳುತ್ತದೆ. ಹೀಗಾಗಿ ಅವರು ಹಿಜಡಾಗಳಿಗೆ ಜನ್ಮ ನೀಡುತ್ತಾರೆ. ಸರಿಯಾಗಿ ಬಟ್ಟೆತೊಡುವ ಪುರಷ ಮತ್ತು ಮಹಿಳೆಯರಿಗೆ ಒಳ್ಳೆಯ ಮಗು ಜನಿಸುತ್ತದೆ ಎಂದು ಹೇಳಿದ್ದಾರೆ. ರಜಿತ್ ಕುಮಾರ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕ ರಜಿತ್ ಕುಮಾರ್ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
Comments