ಪೆಟ್ರೋಲ್, ಡೀಸೆಲ್ ಯಾಕೆ ದುಬಾರಿಯಾಗಿದೆ ಅಂತ ಒಮ್ಮೆ ಯೋಚಿಸಿದಿರಾ..?
ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ 4 ವರ್ಷಗಳಲ್ಲೇ ಅತ್ಯಂತ ಹೆಚ್ಚು ದರ ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 73.83 ರೂಪಾಯಿಗಳಾದರೆ, ಡೀಸೇಲ್ ಬೆಲೆ ಲೀಟರ್ ಗೆ 64.69 ರೂಪಾಯಿಗಳಾಗಿತ್ತು. ಹಾಗಿದ್ರೆ ಯಾಕೆ ತೈಲದ ಬೆಲೆ ಗಗನಮುಖಿಯಾಗಿದೆ ಅನ್ನೋದನ್ನು ನೋಡೋದಾದ್ರೆ.
ಭಾರತದಲ್ಲಿ ಪೆಟ್ರೋಲ್ ಬೆಲೆ ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲೆ ಅವಲಂಬಿತವಾಗಿರುತ್ತದೆ. 2014-2016 ರ ಮಧ್ಯಭಾಗದವರೆಗೆ ಕಚ್ಚಾ ತೈಲದ ಬೆಲೆ ಇಳಿಕೆಯಾಗಿತ್ತು. ಆದರೆ 2017 ಜುಲೈ ನಂತರದಲ್ಲಿ 47 % ಏರಿಕೆಯಾಗಿದೆ. ಪೆಟ್ರೋಲ್ ಹಾಗೂ ಡೀಸೇಲ್ ಮಾರಾಟದ ಬೆಲೆಯಲ್ಲಿ ಸರ್ಕಾರ ಸಂಗ್ರಹಿಸುವ ಟ್ಯಾಕ್ಸ್ ಹಾಗೂ ಪರೋಕ್ಷ ತೆರಿಗೆಗಳಾದ ವ್ಯಾಟ್ ಹಾಗೂ ಅಬಕಾರಿ ಸುಂಕಗಳೂ ಒಳಗೊಂಡಿದೆ. ಒಟ್ಟು ಪೆಟ್ರೋಲ್ ಬೆಲೆಯ ಶೇ.48.2 ರಷ್ಟು ಭಾಗ ಹಾಗೂ ಡೀಸೇಲ್ ನ ಶೇ. 38.9 ರಷ್ಟು ಭಾಗ ರಾಜ್ಯ ಹಾಗೂ ಕೇಂದ್ರದ ತೆರಿಗೆಗಳಿಗೇ ಹೋಗುತ್ತೆ. ಹೀಗಾಗಿಯೇ ಪೆಟ್ರೋಲ್ ಹಾಗೂ ಡೀಸೇಲ್ ಅಂದರೆ ಜೇಬಿಗೆ ಕನ್ನ ಅನ್ನೋ ಮಾತು ಸದ್ಯಕ್ಕೆ ಹೆಚ್ಚಾಗಿದೆ.
Comments