ಇಂದು ತಮಿಳುನಾಡು ಬಂದ್. ಇನ್ನೂ ಮುಗಿದಿಲ್ವ ಕಾವೇರಿ ವಿವಾದ..!
ಚನ್ನೈ:- ಬಹಳ ವರ್ಷಗಳಿಂದಲೂ ಕೂಡ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಕಾವೇರಿ ವಿಚಾರಕ್ಕಾಗಿ ಸಾಕಷ್ಟು ರೀತಿಯ ಗಲಾಟೆಗಳು ಆಗಿವೆ. ಕರ್ಫ್ಯೂಗಳು ಕೂಡ ಸಂಭವಿಸಿವೆ,ಅದೇಷ್ಟೋ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಅದೇಷ್ಟೋ ಜನ ಜೀವ ಕಳೆದುಕೊಂಡಿದ್ದಾರೆ. ಆದರೂ ಕೂಡ ಇನ್ನೂ ಮಾತ್ರ ಕಾವೇರಿ ವಿವಾದ ಸುದ್ದಿಯಾಗುತ್ತಲೆ ಇದೆ.
ಡಿಎಂಕೆ ಮತ್ತು ತಮಿಳುನಾಡಿನ ಇನ್ನಿತರ ವಿಪಕ್ಷ ಸದಸ್ಯರು ಕಾವೇರಿ ಜಲ ನಿರ್ವಹಣೆ ಮಂಡಳಿ ನಿರ್ಮಿಸುವಂತೆ ಒತ್ತಾಯಿಸಿ ಮತ್ತು ಮಂಡಳಿಯನ್ನು ನಿರ್ಮಿಸುವಲ್ಲಿ ಕೇಂದ್ರ ಸರ್ಕಾರವು ವಿಳಂಬ ನೀತಿಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ ತಮಿಳುನಾಡು ಬಂದ್ ಗೆ ಇಂದು ಕರೆ ನೀಡಿದ್ದಾರೆ.
ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ರಾಜ್ಯವ್ಯಾಪ್ತಿ ತಮಿಳುನಾಡಿನಾದ್ಯಂತ ಬಿಗಿ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿದೆ.. ಕರ್ನಾಟಕದಿಂದ ತಮಿಳುನಾಡಿಗೆ ಸಂಚರಿಸುವ 250 ಕ್ಕೂ ಹೆಚ್ಚು ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ರದ್ದು ಮಾಡಲಾಗಿದೆ.
ತಮಿಳುನಾಡಿನಲ್ಲಿ ಹಲವಡೆ ಬಿಗಿ ಬಂದೋಬಸ್ತ್ ಇದ್ದರೂ ಕೂಡ ರಸ್ತೆ ತಡೆ, ಅನೆಕ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಪ್ರತಿಭಟನೆಯ ಕಾವು ಜೋರಾಗಿದ್ದು ಡಿ.ಎಂ.ಕೆ ಯ ಹಲವು ಸದಸ್ಯರು ರಸ್ತೆಯಲ್ಲಿಯೇ ಮಲಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಫೆ.16 ರಂದು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪುನೀಡಿದ್ದ ಹಿನ್ನಲೆಯಲ್ಲಿ ಆರು ವಾರಗಳ ಒಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶವನ್ನು ನೀಡಿತ್ತು. ಆದರೆ ಈ ವಿಷಯಕ್ಕೆ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಯಾವುದೆ ರೀತಿಯ ಮಾಹಿತಿಯನ್ನು ನೀಡಿಲ್ಲ. ಈ ರೀತಿಯಾಗಿ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ತಮಿಳು ನಾಡಿನವರ ದೂರಾಗಿದೆ. ಏಪ್ರಿಲ್ 9ರಂದು ತಮಿಳುನಾಡು ಸರ್ಕಾರ ಕೇಂದ್ರದ ವಿರುದ್ದ ಹಾಕಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಯಲಿದೆ.
Comments