ಇದನ್ನೊಮ್ಮೆ ಓದಿ:- ನಿಮಗೆ ಗೊತ್ತಿಲ್ಲದ ಕೆಲವೊಂದು ಇನ್ಟ್ರೆಸ್ಟಿಂಗ್ ವಿಷಯಗಳು

ವಿಶೇಷವಾಗಿ ಕೆಲವೊಂದು ವಿಷಯಗಳ ಬಗ್ಗೆ ನಮಗೆ ಏನು ಕೂಡ ಗೊತ್ತಿರುವುದಿಲ್ಲ.. ಕೆಲವೊಮ್ಮೆ ತಿಳಿದುಕೊಂಡರೂ ಕೂಡ, ತಿಳಿದುಕೊಳ್ಳಬೇಕಾಗಿರುವುದು ಸಾಕಷ್ಟು ಇರುತ್ತದೆ.. ಈ ಕೆಳಗೆ ಇರುವ ವಿಷಯಗಳನ್ನು ಒಮ್ಮೆ ಓದಿ .. ಸಖತ್ ಇನ್ಟ್ರೆಸ್ಟಿಂಗ್ ಅನಿಸುತ್ತದೆ.
ಆಗಸ್ಟ್ ತಿಂಗಳು ಬಂದ್ರೆ ಸಾಕು ನಮಗೆ ನೆನಪಾಗೋದೆ ಸ್ವತಂತ್ರ ದಿನಾಚರಣೆ. ಸ್ವತಂತ್ರ ತಂದ ಅನೇಕ ಮಹಾನ್ ಪುರುಷರನ್ನ ನಾವು ನೆನೆಯಬಹುದು..? ಆಗಸ್ಟ್ 15 1947 ರಂದು ನಮ್ಮ ಭಾರತ ದೇಶ ಸ್ವತಂತ್ರವಾಯಿತು.. sಸ್ವತಂತ್ರ ಬಂದ ಮೇಲೆ ಸಾಕಷ್ಟು ರೀತಿಯ ಬದಲಾವಣೆಗಳು ಕೂಡ ಆಗಿವೆ.. ನಮ್ಮ ದೇಶ ಬ್ರಿಟಿಷರಿಂದ ಮುಕ್ತಿ ಪಡೆಯಿತು. ಆದರೆ ವಿಷಯ ಏನು ಗೊತ್ತಾ.ಆಗಸ್ಟ್ ತಿಂಗಳಿನಲ್ಲಿಯೆ ಹೆಚ್ಚು ಮಕ್ಕಳು ಜನಿಸುವುದು ಅನ್ನೋದನ್ನ ವಿಜ್ಞಾನಿಗಳು ಸರ್ವೆ ಮಾಡಿದ್ದಾರೆ...
ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ನಾವು ಸಾಕಷ್ಟು ರೀತಿಯ ಕುತೂಹಲಕಾರಿ ವಿಷಯಗಳನ್ನ ಹೇಳೆ ಇರ್ತೀವಿ. ಪ್ರಾಣಿ ಪಕ್ಷಿಗಳ ಬಗ್ಗೆ ಹೇಳಿದಷ್ಟು ಕೂಡ ಕಡಿಮೆಯೆ. ಯಾಕಂದ್ರೆ ಅಷ್ಟು ವಿಚಿತ್ರ ಈ ಪ್ರಾಣಿ ಪ್ರಪಂಚ. ಕೆಲವೊಂದು ಪ್ರಾಣಿಗಳಿಗೆ ಹೃದಯನೆ ಇರುವುದಿಲ್ಲ.. ಇನ್ನೂ ಕೆಲವು ಪ್ರಾಣಿಗಳಿಗೆ ಒಂದಕ್ಕಿಂತ ಜಾಸ್ತಿ ಹೃದಯಗಳು ಇರ್ತಾವೆ...ಅಷ್ಟು ವಿಚಿತ್ರ ಈ ಪ್ರಾಣಿ ಪ್ರಪಂಚ.. ಮನುಷ್ಯರಿಗೆ ಸಾಮಾನ್ಯವಾಗಿ ಎಷ್ಟು ಹಲ್ಲುಗಳು ಇರ್ತಾವೆ ಹೇಳಿ.. 32 ಅಂತ ಎಲ್ಲರು ಹೇಳ್ತಾರೆ..ಆದರೆ ಕರಡಿಗೆ ಎಷ್ಟು ಹಲ್ಲುಗಳು ಇರ್ತಾವೆ ಹೇಳಿ, ಬರೋಬ್ಬರಿ 42 ಹಲ್ಲುಗಳು ಇವೆ. ಎಷ್ಟು ಆಶ್ಚರ್ಯ ಅಲ್ವ...
ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಇರುವುದರಿಂದ ಅದು ಹುಳಿಯಾಗಿರುತ್ತದೆ ಅನ್ನೋದು ಎಲ್ಲರಿಗೂ ಗೊತ್ತು, ಲಿಂಬೆಹಣ್ಣಿನಲ್ಲಿ ಸಕ್ಕರೆಯ ಅಂಶವು ಕೂಡ ಹೆಚ್ಚಾಗಿರುತ್ತದೆ, ಎಷ್ಟು ಇರುತ್ತದೆ ಅಂದರೆ ಸ್ಟ್ರಾಬೆರಿಹಣ್ಣಿನಲ್ಲಿರುವ 70 ರಷ್ಟು ಸಕ್ಕರೆಯ ಅಂಶ ನಿಂಬೆಹಣ್ಣಿನಲ್ಲಿ ಇರುತ್ತದೆ.. ಆದರೆ ಸಿಟ್ರಿಕ್ ಆಸಿಡ್ ಸಿಹಿಯನ್ನು ಹೀರುವ ಗುಣವನ್ನು ಹೊಂದಿರುವುದರಿಂದ ಸಕ್ಕರೆಯ ಅಂಶವನ್ನು ಹೀರಿಕೊಳ್ಳುತ್ತದೆ.. ಆದ್ದರಿಂದ ನಿಂಬೆಯ ಹಣ್ಣು ಹುಳಿಯಾಗುತ್ತದೆ.
ನಾವು ವಾಸಿಸುವ ಭೂಮಿಯ ಮೇಲ್ಮೈಯಲ್ಲಿ ಸುಮಾರು ಮೂರು ಭಾಗದಷ್ಟು ನೀರು ಇದೆ.ನದಿಗಳು ತೀರ ಪ್ರದೇಶಗಳು ಇವೆ. ಇದರಲ್ಲಿ ಅಂತದ್ದು ಏನಿದೆ ಆಶ್ವರ್ಯ ಪಡುವಂತದ್ದು ಅಂತ ನಿಮಗೆ ಅನಿಸಬಹುದು ಅಲ್ವ. ಆದರೆ ನೀರಿನಲ್ಲಿಯೆ ಶೇ 85 ರಷ್ಟು ಸಸ್ಯಗಳ ಜೀವವಿದೆ ಎಂಬುದನ್ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಸಸ್ಯಗಳಲ್ಲೂ ಕೂಡ ಆಮ್ಲಜನಕ ಇದೆ ಎಂಬುದು ಎಲ್ಲರಿಗೂ ಕೂಡ ಗೊತ್ತಿರೊ ವಿಷಯವೆ. ಆದರೆ ಶೇ 85 ರಷ್ಟು ಸಸ್ಯದ ಜೀವವು ನೀರಿನಲ್ಲಿದೆ ಅನ್ನೋದು ವಾಸ್ತವ.
Comments