“ಕಮಲ” ಕ್ಷಮೆ ಕೇಳದಿದ್ದರೆ ಕೋರ್ಟ್ ಗೆ ಹೋಗುವೆ :-ನಟ ಚೇತನ್

ನಟ ಚೇತನ್, ಸ್ಯಾಂಡಲ್ ವುಡ್ ನಲ್ಲಿ ಬೆರಳೆಣಿಯಷ್ಟು ಸಿನಿಮಾ ಕೊಟ್ಟರು ಸಹ ಮನೆ ಮಾತಾಗಿರು ನಟ. ಆ ದಿನಗಳು, ಮೈನಾ ಚಿತ್ರದ ಮೂಲಕ ತನ್ನ ನಟನಾ ಕೌಶಲ್ಯದಿಂದ ಮನೆ ಮಾತಾಗಿರುವ ನಟ .. ಆದರೆ ಈ ನಟ ಇತ್ತಿಚಿಗೆ ತುಂಬಾ ಹೆಸರು ಮಾಡಿದ್ದು ಮಾತ್ರ ಒಬ್ಬ ಸಮಾಜಸೇವಕನಾಗಿ.
ಹೌದು,ನಟ ಚೇತನ್ ನಟ ಅನ್ನುವುದಕ್ಕಿಂತಲೂ ಒಬ್ಬ ಸಮಾಜ ಸೇವಕ ಅಂದರೆ ತಪ್ಪಾಗುವುದಿಲ್ಲ.. ಇದಕ್ಕೆ ಒಳ್ಳೆ ನಿದರ್ಶನ ಎಂದರೆ ದಿಡ್ಡಳ್ಳಿ ಆದಿವಾಸಿಗಳ ಪರವಾಗಿ ನಿಂತು ಹೋರಾಡಿದ್ದು. ದಿಡ್ಡಳ್ಳಿ ಆದಿವಾಸಿಗಳ ಹೋರಾಟವನ್ನು ನಕ್ಸಲ್ ಪ್ರೇರಿತ ಹೋರಾಟ ಎಂದು ಚಾರ್ಜ್ ಶೀಟ್ ಅನ್ನು ಬಿಡುಗಡೆ ಮಾಡಿರುವ ಬಿಜೆಪಿ ಈ ಕೂಡಲೆ ಅದನ್ನು ಹಿಂಪಡೆಯುವಂತೆ ಮತ್ತು ಕ್ಷಮೆ ಕೇಳಬೇಕು ಇಲ್ಲವಾದರೆ ಕಾನೂನು ರೀತಿಯಾಗಿಯೇ ಹೋರಾಟವನ್ನು ನಡೆಸುವುದಾಗಿ ನಟ ಚೇತನ್ ಎಚ್ಚರಿಕೆಯನ್ನು ಕೂಡ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದ ಅವರು, ದಿಡ್ಡಳ್ಳಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿದೆವು. ಸಂವಿಧಾನದ ಚೌಕಟ್ಟಿನಲ್ಲಿ ಅಹಿಂಸಾವಾದದ ಹೋರಾಟ ನಡೆಸಿದ್ದು, ಎಲ್ಲಿಯೂ ಕೂಡ ನಾವು ಕಾನೂನು ಉಲ್ಲಂಘಿಸಲಿಲ್ಲ. ಈ ಹೋರಾಟದ ಫಲವಾಗಿ ಪ್ರಸ್ತುತ 528 ಮನೆಗಳು ನಿರ್ಮಾಣವಾದವು. ಇನ್ನೂ ಸಾವಿರ ಮನೆಗಳನ್ನು ಕಟ್ಟಲಾಗುತ್ತಿದೆ. ದಿಡ್ಡಳ್ಳಿಯ ಆದಿವಾಸಿಗಳು ಕೂಡ ನಮ್ಮವರಾಗಿದ್ದು ಅವರ ಪರ ಹೋರಾಟಕ್ಕೆ ನಕ್ಸಲ್ ಹಣೆಪಟ್ಟಿ ಕಟ್ಟಿರುವ ಬಿಜೆಪಿ ಮುಖಂಡರು ಕ್ಷಮೆ ಕೋರಲೇಬೇಕು ಎಂದು ವಾಗ್ದಾಳಿಯನ್ನು ಕೂಡ ಈ ಸಂದರ್ಭದಲ್ಲಿ ನಡೆಸಿದರು. ಚಾರ್ಜ್'ಶೀಟ್ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಕೂಡ ತಿಳಿಸಿದರು.
Comments