ಸರ್ಕಾರದಿಂದ ಸಿಗುತ್ತೆ 3 ಲಕ್ಷ ರೂ..! ಯಾರಿಗೆ ಸಿಗುತ್ತೆ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಈಗಾಗಲೇ ಹೆಣ್ಣು ಮಕ್ಕಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಸಾಕಷ್ಟು ರೀತಿಯ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿಯೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಯವನ್ನು ನಿರ್ವಹಿಸುತ್ತಿದೆ. ಆದರೆ ಜನಸಾಮಾನ್ಯರಿಗೆ ಮಾತ್ರ ಇದ್ಯಾವುದರ ಅರಿವೆಯೂ ಕೂಡ ಇಲ್ಲದಂತೆ ಇರುತ್ತಾರೆ.ಆದರೆ ಮಹಿಳೆಯರಿಗೆ ಇರುವ ಯೋಜನೆಗಳಿಗೆ ಈಗ ಮತ್ತೊಂದು ಹೊಸ ಯೋಜನೆ ಸೇರಿಕೊಳ್ಳುತ್ತಿದೆ. ಅದೇ ‘ಉದ್ಯೋಗಿನಿ’ ಯೋಜನೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯವನ್ನು ನೀಡುತ್ತಿದೆ
ಮಹಿಳೆಯರು ಆರ್ಥೀಕವಾಗಿ ಸಬಲರಾಗಲು ಉದ್ಯೋಗಿನಿ ಯೋಜನೆಯಲ್ಲಿ ಮಹತ್ತರ ಬದಲಾವಣೆ ತಂದಿರುವ ರಾಜ್ಯ ಸರ್ಕಾರ 3 ಲಕ್ಷದವರೆಗೆ ಸಾಲವನ್ನು ನೀಡುತ್ತಿದೆ. ಮಹಿಳೆಯರು ಕೂಡ ಸ್ವಯಂ ಉದ್ಯೋಗಕಾಂಕ್ಷಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರ ಜೊತೆಯಲ್ಲಿಯೇ ಫಲಾನುಭವಿಗಳು 90.000 ರೂ ವರೆಗೆ ಸಬ್ಸಿಡಿ ಸಹ ಪಡೆಯಬಹುದಾಗಿದೆ
ಸ್ವಯಂ ಉದ್ಯೋಗದ ದೃಷ್ಟಿಯಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ನಿಗಮದ ವತಿಯಿಂದ ಉದ್ಯೋಗಿನಿ ಎಂಬ ಸಹಾಯಧನ ಯೋಜನೆಯನ್ನು ಜಾರಿಗೆ ತಂದಿದ್ದು, ಬ್ಯಾಂಕುಗಳಿಂದ ನೀಡುವ ಸಾಲಕ್ಕೆ ನಿಗಮದಿಂದ ಸಹಾಯಧನ ನೀಡಲಾಗುತ್ತದೆ.
ಅರ್ಹತೆಗಳು:-
- ಅಂಗವಿಲಕರಿಗೆ, ವಿಧವೆಯರಿಗೆ, ಆರ್ಧಿಕ ಪರಿಸ್ಥಿತಿ ಸರಿ ಇಲ್ಲದ ಮಹಿಳೆಯರಿಗೆ ಮೊದಲ ಆದ್ಯತೆ
- 18 ರಿಂದ 55 ವರ್ಷದೊಳಗಿನ ಎಲ್ಲಾ ಮಹಿಳೆಯರು ಈ ಯೋಜನೆಯಲ್ಲಿ ಹಣ ಪಡೆಯಲು ಅರ್ಹರಾಗಿರುತ್ತಾರೆ
- ವಾರ್ಷಿಕವಾಗಿ5 ಲಕ್ಷ ರೂ ಒಳಗೆಯೆ ಆದಾಯವನ್ನು ಹೊಂದಿರಬೇಕು.
ಈ ಯೋಜನೆಯಲ್ಲಿ ಮಹಿಳೆಯರು ದಿನಸಿ ಅಂಗಡಿ, ಟೈಲರಿಂಗ್, ಮೀನು ಮಾರಾಟ, ಬೇಕರಿ, ಉಪ್ಪಿನಕಾಯಿ ಮಾರಾಟ, ಬ್ಯೂಟಿ ಪಾರ್ಲರ್, ಅಗರಬತ್ತಿ ಮಾರಾಟ, ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ ಇನ್ನೂ ಹಲವಾರು ರೀತಿಯ ಉದ್ಯೋಗಗಳಲ್ಲಿ ಈ ಹಣವನ್ನು ವಿನಿಯೋಗಿಸಿಕೊಳ್ಳಬಹುದು.
Comments