ಬ್ಯಾಂಕ್ ಎಟಿಎಂ ವಿರುದ್ಧ ಗ್ರಾಹಕರ ಆಕ್ರೋಶ
ಹಡಗಲಿ ತಾಲೂಕಿನ ಹೊಳಲು ಗ್ರಾಮದ ಬ್ಯಾಂಕ್ ನ ಎಟಿಎಂ ನಲ್ಲಿ ಗ್ರಾಹಕರೊಬ್ಬರಿಗೆ ಹರಿದ ನೋಟುಗಳು ಬಂದಿರುವುದು ಪತ್ತೆಯಾಗಿದೆ. ಐದು ನೂರು ಮುಖಬೆಲೆಯ ಹತ್ತಾರು ನೋಟುಗಳು ಕಂಡು ಬಂದಿದ್ದು, ಸಾರ್ವಜನಿಕರನ್ನು ತಲ್ಲಣಗೊಳಿಸಿವೆ. ಗ್ರಾಮದ ವ್ಯಕ್ತಿಯೊಬ್ಬರು ಎಟಿಎಂನಲ್ಲಿ ಎರಡು ಸಾವಿರ ರೂ. ಹಣ ಡ್ರಾ ಮಾಡಿದ್ದಾರೆ.
ಆದರೆ ಈ ವೇಳೆ ಮೂರು ಹರಿದ 500 ರೂ. ನೋಟುಗಳು ಎಟಿಎಂನಲ್ಲಿ ದೊರೆತಿವೆ. ಇದರಿಂದ ಆತಂಕಗೊಂಡ ಗ್ರಾಹಕರು ಬ್ಯಾಂಕಿಗೆ ತೆರಳಿ ನೋಟು ಬದಲಾವಣೆ ಮಾಡಿಕೊಡುವಂತೆ ಕೇಳಿದ್ದಾರೆ. ಬ್ಯಾಂಕ್ ವ್ಯವಹಾರ ರಹಿತ ದಿನವಾಗಿರುವುವದರಿಂದ ನಾಳೆ ಬದಲಾವಣೆ ಮಾಡಿಕೊಡುವುದಾಗಿ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.
Comments