ಪ್ರೇಕ್ಷಕರಿಗೆ 'ಕಚಡ ನನ್ ಮಕ್ಳು' ಎಂದ ಭಂಡಾರಿ ಬ್ರದರ್ಸ್

ಈ ಸಿನಿಮಾ ಎರಡು ವಾರಗಳ ಹಿಂದೆ ಬಿಡುಗಡೆಯಾಗಿತ್ತು. ಆದರೆ 'ರಂಗಿತರಂಗ' ರೇಂಜ್ ಗೆ ಈ ಸಿನಿಮಾ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. 'ರಾಜರಥ' ಸಿನಿಮಾ ನೋಡಿದ ಬಹುಪಾಲು ಮಂದಿ ಸಿನಿಮಾ ಅಷ್ಟೊಂದು ಚೆನ್ನಾಗಿಲ್ಲ, ಸಿಕ್ಕಾಪಟ್ಟೆ ಬೋರ್ ಎಂದಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿಯೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿರಲಿಲ್ಲ. ಇಷ್ಟೆಲ್ಲ ಆದ ನಂತರ ಈಗ 'ರಾಜರಥ' ಸಿನಿಮಾ ನೋಡದ ಪ್ರೇಕ್ಷಕರಿಗೆ ಅಣ್ಣ-ತಮ್ಮ ಇಬ್ಬರೂ 'ಕಚಡ ನನ್ ಮಕ್ಳು' ಎಂದು ಬೈದಿದ್ದಾರೆ. ಭಂಡಾರಿ ಸಹೋದರರು ಬೈದಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚಿಗೆ 'ರಾಜರಥ' ಸಿನಿಮಾದ ಬಗ್ಗೆ ನಡೆದ ಸಂದರ್ಶನದಲ್ಲಿ ಚಿತ್ರದ ನಾಯಕ ಅನೂಪ್ ಭಂಡಾರಿ, ನಿರ್ದೇಶಕ ನಿರೂಪ್ ಭಂಡಾರಿ ಮತ್ತು ಚಿತ್ರದ ನಾಯಕಿ ಅವಾಂತಿಕಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ನಿರೂಪಕಿ Rapid ರಶ್ಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೂರು ಮಂದಿ 'ರಾಜರಥ' ಸಿನಿಮಾ ನೋಡದ ಪ್ರೇಕ್ಷಕರಿಗೆ 'ಕಚಡ ನನ್ ಮಕ್ಳು' ಎಂದು ಬೈದಿದ್ದಾರೆ.
Comments