ಕಮಲದೇವಿ ಚಟ್ಟೋಪಾಧ್ಯಾಯ ಅವರಿಗೆ ಗೂಗಲ್ ನಿಂದ ಡೂಡಲ್ ಗೌರವ

ಹೆಣ್ಣು ಅಬಲೆಯಲ್ಲ ಸಬಲೆ.. ಈಕೆ ಯಾವ ಸಾಧನೆ ಬೇಕಾದರೂ ಮಾಡಲು ಸಿದ್ಧ. ಆಕೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ತನ್ನ ಛಾಪನ್ನು ಮೂಡಿಸಿದ್ದಾಳೆ. ಬಹಳ ವರ್ಷಗಳ ಹಿಂದೆ ನಾಲ್ಕು ಗೋಡೆಯ ಮಧ್ಯೆ ಇದ್ದ ಹುಡುಗಿಯರು ಇಂದು ಪ್ರಪಂಚದ ನಾನಾ ಮೂಲೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎನ್ನುವ ರೀತಿ ಹಲವಾರು ಸಾಧನೆಗಳಿಗೆ ಕೈ ಹಾಕಿ ಗೆದ್ದಿದ್ದಾರೆ.
ಯಾರಿಗಿಂತ ನಾವೇನು ಕಡಿಮೆ ಇಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ. ಹೆಣ್ಣು ಮಕ್ಕಳು ಎಂದರೆ ಹಾಗೆ ಎಲ್ಲವನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಸಾರ್ಥಕತೆಯ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುತ್ತಾರೆ. ಕಷ್ಟಕ್ಕೂ ಕಣ್ಣೀರು ಸುಖಕ್ಕೂ ಕಣ್ಣಿರೂ ಹಾಕುವ ನಮ್ಮ ಹೆಣ್ಣು ಮಕ್ಕಳು ನಿಜಕ್ಕೂ ಅದ್ಭುತ... ತನಗೆ ಎಷ್ಟೆ ಕಷ್ಟ ಬಂದರೂ ಕೂಡ ತನ್ನ ಒಡಲಲ್ಲಿ ಇಟ್ಟು ಕೊಳ್ಳುವ ಕರುಣಾಮಯಿ. ಇನ್ನೂ ಹೆಣ್ಣು ಮಕ್ಕಳ ಸಾಧನೆಯ ಪಟ್ಟಿಯಲ್ಲಿ ಸಾಧನೆ ಮಾಡಿದವರು ಕಮಲಾದೇವಿ ಚಟ್ಟೋಪಾಧ್ಯಾಯ.. ಇವರು ಸಮಾಜಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡ ಮಹಾನ್ ತಾಯಿ. ಇನ್ನೂ ಇವರು ಹುಟ್ಟಿದ್ದು 1903 ಏಪ್ರಿಲ್ 2 ರಂದು ಮಂಗಳೂರಿನಲ್ಲಿ.. ತಾಯಿ ಗಿರಿಜಾ ಬಾಯಿ. ಕಮಲಾದೇವಿಯವರು ಹೆಣ್ಣು ಮಕ್ಕಳ ಪರ ಹೋರಾಡಿದರು. ಅವರಿಗೆ 1920 ರಲ್ಲಿ ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರ ಜೊತೆ ವಿವಾಹವಾಯಿತು. ನಂತರ ಪತಿಯ ಜೊತೆ ಲಂಡನ್ನಿಗೆ ತೆರಳಿ ಬೆಡ್ ಫೋರ್ಡ್ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಅಧ್ಯಯನವನ್ನು ಮುಗಿಸಿದರು.
1932ರಲ್ಲಿ ದಂಪತಿಗಳು ಮತ್ತೆ ಭಾರತಕ್ಕೆ ಬಂದರು.ಕಮಲಾದೇವಿಯವರು ಮಹಾತ್ಮಗಾಂಧಿಯವರ ಅಸಹಕಾರ ಚಳುವಳಿ ಯಲ್ಲಿ ಭಾಗವಹಿಸಿ ಸೇವಾದಳವನ್ನು ಕೂಡ ಸೇರಿಕೊಂಡರು. ಇದೆಲ್ಲಾದರ ನಡುವೆ ಕಮಲಾದೇವಿಯವರಿಗೆ ಪತಿಯಿಂದ ವಿವಾಹ ವಿಚ್ಛೇದನವು ಆಯಿತು.ಸಾಕಷ್ಟು ನಿರಾಶ್ರಿತರ ಪುನರ್ವಸತಿಗೆ ಶ್ರಮಿಸಿದರು. ಎಲ್ಲಾ ರೀತಿಯಲ್ಲಿಯೂ ಕೂಡ ಸಮಾಜಸೇವೆಯಲ್ಲಿ ತನ್ನನ್ನ ತಾನು ತೊಡಗಿಸಿಕೊಂಡರು. ಭಾರತ ಸರ್ಕಾರವು ಕಮಲಾದೇವಿಯವರಿಗೆ 1955ರಲ್ಲಿ ಪದ್ಮಭೂಷಣ ನೀಡಿ ಗೌರವಿಸಿದೆ. ಪದ್ಮವಿಭೂಷಣ ಹಾಗೂ ರಾಮೊನ್ ಮೆಗ್ಗಾಸೆ ಪ್ರಶಸ್ತಿಗೂ ಕೂಡ ಭಾಜನರಾಗಿದ್ದಾರೆ.ಇದೀಗ ಅವರು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪನ್ನು ನೆನಪಿಸಿಕೊಳ್ಳಲು ಗೂಗಲ್ ಕೂಡ ಅವರಿಗೆ ಡೂಡಲ್ ಗೌರವವನ್ನು ಸಲ್ಲಿಸಿದೆ.
Comments