ನೆಲ್ಸನ್ ಮಂಡೇಲರ ಪತ್ನಿ ವಿನ್ನಿ ಮದಿಕಿಜೆಲಾ ಮಂಡೇಲಾ ವಿಧಿವಶ

03 Apr 2018 11:21 AM | General
429 Report

ದಕ್ಷಿಣ ಆಫ್ರಿಕಾದ ದಿ. ನೆಲ್ಸನ್‌ ಮಂಡೇಲಾರ ಪರಿತ್ಯಕ್ತ ಪತ್ನಿ ವಿನ್ನಿ ಮಂಡೇಲಾ(81) ದೀರ್ಘ‌ಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾದರು.

ವರ್ಣಬೇಧ ನೀತಿಯ ವಿರುದ್ದ ಹೋರಾಡಿದ ಪ್ರಖ್ಯಾತ ಹೋರಾಟಗಾರ ನೆಲ್ಸನ್ ಮಂಡೇಲ ಅವರ ಪತ್ನಿ ವಿನ್ನಿ ಮದಿಕಿಜೆಲಾ ಮಂಡೇಲಾ ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲದವರಿಂದ ತಿಳಿದುಬಂದಿದೆ. 81ನೇ ವಯಸ್ಸಿನ ವಿನ್ನಿ ಅವರು ದೀರ್ಘಾಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ನಂತರ ಮೈತಪಟ್ಟಿದ್ದಾರೆ ಎಂದು ನೆಲ್ಸನ್ ಮಂಡೇಲಾ ಕುಟುಂಬದ ವಕ್ತಾರರಾದ ವಿಕ್ಟರ್ ಡ್ಲಾಮಿನಿ ತಿಳಿಸಿದ್ದಾರೆ. ಇವರು ತಮ್ಮ ಪತಿ ಜೈಲು ಶಿಕ್ಷೆ ಅನುಭವಿಸುವ ಅವಧಿಯಲ್ಲಿ ಅವರ ಬಿಡುಗಡೆಗಾಗಿ ಹಾಗೂ ದಕ್ಷಿಣ ಆಫ್ರಿಕಾದ ಕಪ್ಪು ವರ್ಣೀಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು. ಕಪ್ಪು ವರ್ಣೀಯರ ಪರ ಹೋರಾಟದಲ್ಲಿ ವಿನ್ನಿ ಅವರ ಸ್ಥಾನ ಕೂಡ ಮಹತ್ವದ್ದು.

Edited By

Shruthi G

Reported By

Madhu shree

Comments