ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕಿಂಗ್ ನ್ಯೂಸ್ ...!!

ಇನ್ನು ಕಳೆದ ನಾಲ್ಕು ದಿವಸದಿಂದ ಬ್ಯಾಂಕ್‌ಗಳಿಗೆ ಸರಣಿ ರಜೆ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಎಟಿಎಂಗಳಲ್ಲಿ ಹಣ ಖಾಲಿಯಾಗಿದ್ದು ಜನತೆ ಹಣಕ್ಕಾಗಿ ಒಂದು ಎಟಿಎಂ ನಿಂದ ಮತ್ತೊಂದು ಎಟಿಎಂಗೆ ತೆರಳುತ್ತಿರುವುದನ್ನು ಕಾಣಿಸುತ್ತಿದೆ. ಇದಲ್ಲದೇ ಬ್ಯಾಂಕ್ ನ ಒಳಗೆ ಕೂಡ ಹಣಕ್ಕಾಗಿ ಜನತೆ ಕ್ಯೂ ನಿಂತಿರುವುದು ಕೂಡ ಕಾಣಿಸುತ್ತಿದೆ.
ಇವೆಲ್ಲದರ ನಡುವೆ ತಿಂಗಳ ಕೆಲವೆಡೆ ಎಟಿಎಂ ಸರಿ ಇದ್ದರೂ, ನೋ ಸರ್ವಿಸ್ ಬೋರ್ಡ್ ಹಾಕಲಾಗಿದೆ. ರಜೆ ಬಗ್ಗೆ ಮೊದಲೇ ತಿಳಿದಿದ್ದರೂ ಹಣಕ್ಕೆ ವ್ಯವಸ್ಥೆ ಮಾಡದ ಬ್ಯಾಂಕ್ಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಹತ್ತಿರುವ ಇರುವ ವೇಳೆಯಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕುವ ಸಲುವಾಗಿ ಈ ರೀತಿ ಬ್ಯಾಂಕ್ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು, ಇದು ಎಷ್ಟರ ಮಟ್ಟಿಗೆ ನಿಜ ಅಂತ ಇಲ್ಲಿ ತನಕ ಬ್ಯಾಂಕ್ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಜನತೆ ಬ್ಯಾಂಕ್ ಹಟವೋ, ಗ್ರಾಹಕ್ ಬಚಾವೋ ಅಂದೋಲನವನ್ನು ಕೈಗೊಂಡರೆ ಹೆಚ್ಚು ಅನುಮಾನ ಪಡಬೇಕಾಗಿಲ್ಲ.
Comments