ಜಿಯೋವಿನಿಂದ ಮತ್ತೆ ಭರ್ಜರಿ ಆಫರ್!
ಭಾರತದ ಟೆಲಿಕಾಂ ಮಾತ್ರಕ ಜಿಯೋ ತನ್ನ ನೂತನ ಜಿಯೋ ಫೈ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. 3595 ರೂಪಾಯಿಗಳ ಬೆನಿಫಿಟ್ಸ್ ಹೊಂದಿರುವ ಜಿಯೋ ಫೈ ಗ್ರಾಹಕರಿಗೆ ಕೇವಲ 704 ರೂಪಾಯಿಗಳಿಗೆ ದೊರೆಯಲಿದೆ.
1999 ರೂ. ಜಿಯೋ ಫೈ: ನೀವು 1,999 ರೂ.ಗೆ JioFi 4G ಹಾಟ್‌ಸ್ಪಾಟ್ ಖರೀದಿಸಿ ಹೊಸ ರಿಲಯನ್ಸ್ ಜಿಯೋ ಸಿಮ್ ಸಂಪರ್ಕ ಪಡೆದುಕೊಳ್ಳಿ. ಜಿಯೋ ಸಂಪರ್ಕವನ್ನು ಸಕ್ರಿಯಗೊಳಿಸುವಾಗ ನಿಮಗೆ ಮೂರು ಜಿಯೋ ಫೈ ಯೋಜನೆಗಳನ್ನು ಆಯ್ಕೆ ಮಾಡಲು ಕೇಳಲಾಗುತ್ತದೆ. ಈ ಪ್ರತಿಯೊಂದು ಯೋಜನೆಯೂ ಅನಿಯಮಿತ ವಾಯ್ಸ್ ಕರೆ, ಪ್ರತಿದಿನ 100 ಎಸ್ಎಂಎಸ್ ಜೊತೆಗೆ ಬರುತ್ತದೆ.
2300 ರೂ. ಶಾಪಿಂಗ್ ವೋಚರ್ಸ್ : 1,999 ರೂ.ಪಾವತಿಸಿ JioFi 4G ಹಾಟ್‌ಸ್ಪಾಟ್ ಖರೀದಿಸಿದ ತಕ್ಷಣವೇ 2300 ರೂಪಾಯಿಗಳ ಶಾಪಿಂಗ್ ವೋಚರ್ಸ್ ನಿಮಗೆ ಸಿಗಲಿದೆ. 1,000ರೂ. ರಿಲಯನ್ಸ್ ಡಿಜಿಟಲ್ ವೋಚರ್, 800 ರೂ. ಮೌಲ್ಯದ ಪೇಟಿಎಂ ವೋಚರ್ ಹಾಗೂ 500 ರೂ. ಮೌಲ್ಯದ A JIO ವೋಚರ್‌ಗಳನ್ನು ನೀವು ಬಳಕೆ ಮಾಡಿಕೊಳ್ಳಬಹುದಾಗಿದೆ.
1,295 ರೂ. ಉಚಿತ ಡೇಟಾ : 1,999 ರೂ.ಪಾವತಿಸಿ JioFi 4G ಹಾಟ್‌ಸ್ಪಾಟ್ ಖರೀದಿಸಿದರೆ 1,295 ರೂಪಾಯಿಗಳ ಉಚಿತ ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ. 8 ತಿಂಗಳ ವ್ಯಾಲಿಡಿಟಿಯಲ್ಲಿ 336GB ಉಚಿತ ಡೇಟಾವನ್ನು ಜಿಯೋ ಒದಗಿಸಿರುವುದರಿಂದ, ಜಿಯೋ ಫೈ ಗ್ರಾಹಕರಿಗೆ ಕೇವಲ 704 ರೂಪಾಯಿಗಳಿಗೆ ಗ್ರಾಹಕರಿಗೆ ದೊರೆಯುತ್ತಿದೆ.
ಜಿಯೋ ಫೈ' ರೀಚಾರ್ಜ್ ಪ್ಲಾನ್ 1 : ಜಿಯೋ ಫೈ ಹಾಟ್‌ಸ್ಪಾಟ್‌ನ ಮೊದಲ ರೀಚಾರ್ಜ್ ಪ್ಲ್ಯಾನ್, ಪ್ರತಿದಿನ 1.5 ಜಿಬಿ 4ಜಿ ಡೇಟಾ, ಅನ್‌ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 ಎಸ್ಎಂಎಸ್ ಆಫರ್ ಅನ್ನು 28 ದಿನಗಳ ವ್ಯಾಲಿಡಿಯಲ್ಲಿ ಹೊಂದಿದೆ. 8 ತಿಂಗಳ ಅವಧಿಯಯಲ್ಲಿರುವ ಈ ಜಿಯೋ ಫೈ ಫ್ಲಾನ್ ಜಿಯೋವಿನ 149 ರೂ. ಮೊಬೈಲ್ ಯೋಜನೆಯನ್ನು ಹೋಲುತ್ತದೆ.
Comments