LPG ಸಿಲಿಂಡರ್ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್
ಪೆಟ್ರೋಲ್ ಹಾಗೂ ಡೀಸೆಲ್ ದರ ನಾಲ್ಕು ವರ್ಷಗಳಲ್ಲೇ ಅತ್ಯಂತ ದುಬಾರಿಯಾಗಿದೆ. ಈ ಮಧ್ಯೆ ಅಡುಗೆ ಅನಿಲ ಬಳಕೆದಾರರಿಗೆ ತೈಲ ಕಂಪನಿಗಳು ಕೊಂಚ ಸಮಾಧಾನಕರ ಸುದ್ದಿ ನೀಡಿವೆ.
ಸಬ್ಸಿಡಿ ರಹಿತ ಎಲ್ ಪಿ ಜಿ ಸಿಲಿಂಡರ್ ದರವನ್ನು 35.50 ರೂಪಾಯಿ ಕಡಿತ ಮಾಡಲಾಗಿದೆ. ಒಂದು ತಿಂಗಳ ಒಳಗಾಗಿ ಎರಡು ಬಾರಿ ಎಲ್ ಪಿ ಜಿ ದರವನ್ನು ಇಳಿಕೆ ಮಾಡಲಾಗಿದೆ. ಮಾರ್ಚ್ ತಿಂಗಳಲ್ಲಿ ಸಹ ಎಲ್ ಪಿ ಜಿ ಬೆಲೆ ಕಡಿಮೆಯಾಗಿತ್ತು. ದರ ಪರಿಷ್ಕರಣೆ ವಾಣಿಜ್ಯ ಸಿಲಿಂಡರ್ ಗಳಿಗೆ ಕೂಡ ಅನ್ವಯವಾಗಲಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 54 ರೂಪಾಯಿ ಕಡಿತ ಮಾಡಲಾಗಿದೆ. 5 ಕೆಜಿ ಸಿಲಿಂಡರ್ ಬೆಲೆ 15 ರೂಪಾಯಿಯಷ್ಟು ಇಳಿಕೆ ಕಂಡಿದೆ.
Comments