ಡ್ರೈವಿಂಗ್ ಲೈಸೆನ್ಸ್ ಮಾಡಿಸುವವರಿಗೊಂದು ಖುಷಿ ಸುದ್ದಿ

31 Mar 2018 1:39 PM | General
1406 Report

ಮೋಟಾರು ವಾಹನ ಕಾಯ್ದೆ 1989ರಲ್ಲಿ ತಿದ್ದುಪಡಿ ಮಾಡಿ ಡಿಎಲ್ ನಿಯಮವನ್ನು ಸುಲಭಗೊಳಿಸಿದೆ.ಈ ಬದಲಾವಣೆ ಏಪ್ರಿಲ್ 1,2018 ರಿಂದ ಜಾರಿಗೆ ಬರಲಿದೆ. ಹೊಸ ತಿದ್ದುಪಡಿಯಿಂದಾಗಿ ಜನರಿಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಸುಲಭವಾಗಲಿದೆ.

ಜೊತೆಗೆ ನಕಲಿ ಡಿಎಲ್ ಗೆ ಬ್ರೇಕ್ ಬೀಳಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾರ್ಚ್ 20ರಂದು ಈ ಬಗ್ಗೆ ಮಾಹಿತಿ ನೀಡಿದೆ.ಏಪ್ರಿಲ್ 1,2018 ರಿಂದ ಕಲಿಕೆ ಡಿಎಲ್, ಹೊಸ ಡಿಎಲ್, ಡಿಎಲ್ ನವೀಕರಣ, ಹೆಸರು, ವಿಳಾಸ ಬದಲಾವಣೆಗೆ ಬೇರೆ ಬೇರೆ ಫಾರ್ಮ್ ತುಂಬುವ ಅಗತ್ಯವಿಲ್ಲ. ಈ ಎಲ್ಲ ಕೆಲಸಕ್ಕೂ ಒಂದೇ ಫಾರ್ಮ್, ಫಾರ್ಮ್-2 ತುಂಬಿದ್ರೆ ಸಾಕು. ಏಪ್ರಿಲ್ 1ರ ನಂತ್ರ ಆಧಾರ್ ಇಲ್ಲದೆ ಡಿಎಲ್ ತಯಾರಿಸಲು ಸಾಧ್ಯವಿಲ್ಲ. ಫಾರ್ಮ್-2ನಲ್ಲಿ ಆಧಾರ್ ಸಂಖ್ಯೆಯನ್ನು ತುಂಬಬೇಕಾಗುತ್ತದೆ. ಅಂಗದಾನಕ್ಕೂ ಅರ್ಜಿಯಲ್ಲಿ ಅವಕಾಶ ನೀಡಲಾಗಿದೆ. ವ್ಯಕ್ತಿ ಬಯಸಿದ್ರೆ ಮರಣದ ನಂತ್ರ ಅಂಗದಾನ ಮಾಡುತ್ತೇನೆಂದು ಆಯ್ಕೆ ಜಾಗದಲ್ಲಿ ತುಂಬಬಹುದಾಗಿದೆ.

 

Edited By

Shruthi G

Reported By

Madhu shree

Comments